ಕೌಶಲಾಭಿವೃದ್ಧಿ ತರಬೇತಿ ಕಾರ‌್ಯಾಗಾರ

CTTTT
Published on


ಚಿತ್ರದುರ್ಗ:ಭಾರತೀಯ ವಿಜ್ಞಾನ ಸಂಸ್ಥೆ,ವಿಜ್ಞಾನ ತಂತ್ರಜ್ಞಾನ ಮತ್ತು ನಾವಿನ್ಯತ ಕೇಂದ್ರ(ಎಸ್‌ಟಿಐ ಹಬ್)ಹಾಗೂ ಸೊಸೈಟಿ ಫಾರ್ ಇ ನ್ನೋವೇಷನ್ ಆ್ಯಂಡ್ ಡೆವಲಪ್‌ಮೆಂಟ್ ಸಹಯೋಗದೊಂದಿಗೆ ಚಳ್ಳಕೆರೆ ತಾಲೂಕು ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನ ವೆಂಬರ್ 4ರಿಂದ 9ರವರೆಗೆ ಉದ್ಯಮಶೀಲತೆ ಮತ್ತು ಕೌಶಲಾಭಿವೃದ್ಧಿ ತರಬೇತಿ ಕಾರ‌್ಯಾಗಾರ ಆಯೋಜಿಸಲಾಗಿದೆ. 18-45 ವರ್ಷ ವಯೋಮಿತಿಯೊಳಗಿನ ಕನಿಷ್ಠ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಅ.20ರೊಳಗೆ ಗಣೇಶ್(89705 82703)ಅಥವಾ ಕೋಟೇಶ್(9743675646)ಅವರಿಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು.
ಅ.25ರೊಳಗೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಎಸ್‌ಸಿ,ಎಸ್‌ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ಇರುತ್ತದೆ. ಆ ಯ್ಕೆಯಾದ ಅಭ್ಯರ್ಥಿಗಳು ಕಡ್ಡಾಯವಾಗಿ 6 ದಿನಗಳ ತರಬೇತಿ ಕಾರ‌್ಯಾಗಾರದಲ್ಲಿ ಭಾಗವಹಿಸಬೇಕು.ಊಟ,ವಸತಿ ಸೌಲಭ್ಯದೊಂದಿಗೆ ತರಬೇತಿ ಉಚಿತವಾಗಿರುತ್ತದೆ ಎಂದು ವಿಜ್ಞಾನ ತಂತ್ರಜ್ಞಾನ ಮತ್ತು ನಾವಿನ್ಯತಾ ಕೇಂದ್ರದ ವ್ಯವಸ್ಥಾಪಕ ಪ್ರತಾಪ್‌ಮೂರ್ತಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net