

ಬಾಗಲಕೋಟೆ: ಇಂದಿನ ಕಾಲದಲ್ಲಿ ಶಿಕ್ಷಣದ ಜೊತೆಗೆ ಕೌಶಲಕ್ಕೆ ಬಹಳಷ್ಟು ಮಹತ್ವ ಇದೆ. ಮಹಿಳೆಯರು ಕೌಶಲದಿಂದ ಉದ್ಯೋಗ ಮಾಡಿದಲ್ಲಿ ಈಡೀ ಕುಟುಂಬವು ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.
ಮಹಿಳಾ ದಿನಾಚರಣೆ ಅಂಗವಾಗಿ ನಗರದ ಬಸವೇಶ್ವರ ಸಹಕಾರಿ ಬ್ಯಾಂಕ್ ಸಭಾಭವನದಲ್ಲಿ ಬಸವೇಶ್ವರ ಬ್ಯಾಂಕ್, ಸಿರಿ ಸಂಸ್ಥೆ, ಬಾಗಲಕೋಟೆ ಜಿಲ್ಲಾ ವನಿತಾಲೋಕ, ವನಶ್ರೀ ಸರ್ವಾಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಸೋಮವಾರ ಪ್ರಸಕ್ತ ಸಾಲಿನ ವಿವಿಧ ಉಚಿತ ಕೌಶಲ ಅಭಿವೃದ್ಧಿ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಮತ್ತು ಬಡ ಮಹಿಳೆಯರಿಗಾಗಿ ಉಚಿತವಾಗಿ ನಮ್ಮ ಬ್ಯಾಂಕಿನಲ್ಲಿ ಅತ್ಯಂತ ಅನುಭವಿ ಶಿಕ್ಷಕಿಯರು ಹಾಗೂ ಅತ್ಯುತ್ತಮ ಕಲಿಕಾ ಸಾಮಗ್ರಿಗಳನ್ನು ಕೊಟ್ಟು ತರಬೇತಿ ನೀಡುತ್ತಾ ಬಂದಿದ್ದು, ಇಂದು ತರಬೇತಿ ಪಡೆದ ಸಾಕಷ್ಟು ಮಹಿಳೆಯರು ಸ್ವಂತ ಉದ್ಯೋಗ ನಡೆಸುತ್ತಿದ್ದಾರೆ. ಕೌಶಲಕ್ಕೆ ಪ್ರಾಮುಖ್ಯತೆ ಇದೆ ಎಂದರು.
ತೋಟಗಾರಿಕಾ ವಿಶ್ವವಿದ್ಯಾಲಯದ ಪುಷ್ಪ ಕೃಷಿ ವಿಭಾಗದ ಮುಖ್ಯಸ್ಥ ಡಾ. ಸತೀಶ ಪಾಟೀಲ ಶಿಬಿರ ನಡೆಸಿಕೊಟ್ಟರು. ಬ್ಯಾಂಕಿನ ನಿರ್ದೇಶಕಿಯರಾದ ಗೀತಾ ನಾರಾ, ಶೈಲಜಾ ಗುಡಗುಂಟಿ, ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ವಿವೇಕಾನಂದ ಕೇಮಾಳಿ, ಅಽಕಾರಿಗಳಾದ ಎಸ್.ಬಿ.ಬದಾಮಿ, ವಿ.ಎಂ.ಹಿರೇಮಠ, ಜ್ಯೋತಿ ನಾವಲಗಿ, ವಿಜಯಲಕ್ಷಿ÷್ಮÃ ದಿಡ್ಡಿಬಾಗಿಲು, ರಾಜೇಶ್ವರಿ ಬೋನಗೇರಿ, ವಿಜಯಲಕ್ಷಿ÷್ಮÃ ಪವಾರ ಉಪಸ್ಥಿತರಿದ್ದರು. ಅರ್ಚನಾ ಗದ್ದಿಮಠ ಪ್ರಾರ್ಥಿಸಿದರು. ಸಿರಿ ಸಂಸ್ಥೆಯ ಅಧ್ಯಕ್ಷೆ ಶಿಲ್ಪಾ ಯರಾಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವನಿತಾಲೋಕದ ಅಧ್ಯಕ್ಷ ಜಯಮ್ಮ ಅಬ್ದುಲಪುರ ವಂದಿಸಿದರು