

ಕಾಗವಾಡ: ವಿದ್ಯಾರ್ಥಿಗಳು ಸರ್ವತೋಮುಖ ಬೆಳವಣಿಗೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅವಶ್ಯ ಎಂದು ಶಿವಾನಂದ ಮಹಾವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಎಸ್.ಎಂ.ಉಮದಿ ಅಭಿಪ್ರಾಯಪಟ್ಟರು.
ಇಲ್ಲಿನ ಶಿವಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಪ್ರಾಯೋಜಿತ ಕಾಮರ್ಸ್ ಅಸೋಸಿಯೇಶನ್ ಶುಕ್ರವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಒಂದು ದಿನದ ಸಂಕಲ್ಪ-2ಕೆ23 ಕಾಮರ್ಸ್ ಫೆಸ್ಟ್ ಉದ್ಘಾಟಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕೌಶಲವನ್ನು ಸರಿಯಾದ ಕ್ರಮದಲ್ಲಿ ಬಳಸಿಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.
ಪ್ರಾಚಾರ್ಯ ಡಾ.ಎಸ್. ಎ.ಕರ್ಕಿ ಮಾತನಾಡಿ, ಸ್ವತ ವಿದ್ಯಾರ್ಥಿಗಳೇ ದಾನಿಗಳಿಂದ ಹಣ ಸಂಗ್ರಹಿಸಿ ಕಾರ್ಯಕ್ರಮ
ವನ್ನು ಆಯೋಜಿಸಿದ್ದಾರೆ. ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪ್ರೊ.ವಿ.ಬಿ.ಬುರ್ಲೆ ಮಾತ ನಾಡಿ, ವಾಣಿಜ್ಯಶಾಸ್ತ್ರ ವಿಭಾಗ ಪ್ರತಿ ವರ್ಷ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಉತ್ತಮ ಕಾರ್ಯನಿರ್ವಹಿಸುತ್ತಿದೆ ಎಂದರು.
ಸಮಾರಂಭದಲ್ಲಿ ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಸುತ್ತಮುತ್ತಲಿನ 15 ಕಾಲೇಜುಗಳಿಂದ ಸುಮಾರು 120 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಫಲಕ ವಿತರಿಸಲಾಯಿತು. ಅಥಣಿ ಕೆಎಲ್‌ಇ ಸಂಸ್ಥೆಯ ಎಸ್.ಎಸ್.ಎಂ.ಎಸ್. ಬಿ.ಬಿ.ಎ ಮಹಾವಿದ್ಯಾಲಯವು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿತು.
ಪ್ರೊ.ಬಿ.ಎ.ಪಾಟೀಲ, ಆಡಳಿತಾಕಾರಿ ಪ್ರೊ.ವಿ.ಎಸ್.ತುಗಶೆಟ್ಟಿ, ಉಪಪ್ರಾಚಾರ್ಯ ಡಾ.ಡಿ.ಡಿ.ನಗರಕರ, ಐಕ್ಯೂಎಸಿ ಸಂಯೋಜಕ ಪ್ರೊ.ಬಿ.ಡಿ.ಧಾಮಣ್ಣವರ, ವಿದ್ಯಾರ್ಥಿ ಕಾರ್ಯದರ್ಶಿ ದಿನೇಶ ಕಾಂಬಳೆ, ಆದರ್ಶ ವಿದ್ಯಾರ್ಥಿ ಆಕಾಶ ಗಾವಡೆ, ಆದರ್ಶ ವಿದ್ಯಾರ್ಥಿನಿ ಪದ್ಮಾವತಿ ನರೋಟಿ, ಡಾ.ಎಸ್.ಪಿ.ತಳವಾರ, ಪ್ರೊ.ಎಸ್.ಎಂ.ಘೋರ್ಪಡೆ, ಪ್ರೊ.ವಿ.ವಿ.ಪಾಟೀಲ, ಸಾಕಾ ಚಿಕ್ಕನರಸೆ, ನಿಖಿತಾ ಸಮಾಜ, ರುಚಿತಾ ಮಲ್ಲೆವಾಡಿ ಇತರರಿದ್ದರು.