ಕೌಶಲ, ಶ್ರಮಕ್ಕೆ ನೀಡುವ ಗೌರವ ಪ್ರತಿಭಾ ಪುರಸ್ಕಾರ

IMG_20250818_144156
Published on

ಗಂಡಸಿ: ವಿದ್ಯಾರ್ಥಿ ಜೀವನ ಎಂಬುದು ಅವರ ಭವಿಷ್ಯ ನಿರ್ಮಾಣದ ಬಹು ಮುಖ್ಯ ಅಡಿಪಾಯ. ಆತನ ಕೌಶಲ, ಶ್ರಮ, ಕಲಿಕೆಯ ಸಾಮರ್ಥ್ಯಕ್ಕೆ ನೀಡುವ ಗೌರವವೇ ಪ್ರತಿಭಾ ಪುರಸ್ಕಾರ. ವಿದ್ಯಾರ್ಥಿ ಜೀವನದಲ್ಲಿ ಈ ಪುರಸ್ಕಾರ ಮಹತ್ವದ ಪಾತ್ರ ವಹಿಸಲಿದೆ ಎಂದು ಪ್ರಾಂಶುಪಾಲ ಚಂದ್ರಶೇಖರ್ ಹೇಳಿದರು.

ಗಂಡಸಿ ಶ್ರೀ ಶಂಭುಲಿಂಗೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಪ್ರಥಮ ವರ್ಷದ ಪಿಯು ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಭವ್ಯ ಭಾರತದ ಭವಿಷ್ಯದ ಪ್ರಜೆಗಳಾಗಿದ್ದು ಪ್ರತಿಭೆಗಳನ್ನು ಗುರುತಿಸಿ ನೈತಿಕ ಮೌಲ್ಯ ಹಾಗೂ ಸೃಜನಾತ್ಮಕತೆ ಬೆಳೆಸುವ ಜವಾಬ್ದಾರಿ ಗುರುಗಳು, ಪಾಲಕರದ್ದು. ಮುಂದಿನ ದಿನಗಳಲ್ಲಿ ಒಬ್ಬ ಉತ್ತಮ ಪ್ರಜೆಯಾಗಿ ರೂಪುಗೊಳ್ಳುವುದರ ಜತೆಗೆ ವಿದ್ಯಾರ್ಥಿಯ ಸಾಧನೆಗೆ ಉತ್ತೇಜನ ನೀಡಿದ ಕೀರ್ತಿ ಗುರುಗಳದ್ದು. ಶಾಲಾ-ಕಾಲೇಜು ಹಂತದಲ್ಲಿ ವಿದ್ಯಾರ್ಥಿ ಪ್ರತಿಭೆ ಗುರುತಿಸುವುದರಿಂದ ಅವರ ಮುಂದಿನ ಉನ್ನತ ವ್ಯಾಸಂಗದ ಉಜ್ವಲ ಭವಿಷ್ಯಕ್ಕೆ ದಾರಿ ದೀಪವಾಗುವುದರ ಜತೆಗೆ ಜೀವನ ಹಸನಾಗಲಿದೆ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ಚಂದ್ರಶೇಖರ್, ನಿವೃತ್ತ ಉಪನ್ಯಾಸಕ ಮಲ್ಲಿಕಾರ್ಜುನಸ್ವಾಮಿ, ಉಪನ್ಯಾಸಕರಾದ ಸೌಭಾಗ್ಯಾ, ಗಂಗಾಧರ್, ಉಷಾ, ಗಂಗಾಧರ್, ಜಯರಾಮು, ನಂಜೇಶಿಗೌಡ, ಸಿಬ್ಬಂದಿ, ಪಾಲಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net