ಕೌಶಲ ಬೆಳೆಸಿಕೊಂಡರೆ ಭವಿಷ್ಯ ಉತ್ತಮ

web1
ನೇಸರಗಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿದರು. ಪ್ರೊ.ವಿನಯ ಕುಲಕರ್ಣಿ, ಸಂಪತ್ ಲಮಾಣಿ, ಡಾ.ಫಕೀರನಾಯ್ಕ ಗಡ್ಡಿಗೌಡರ, ಶಿವಾನಂದ ಹಿರೇಮಠ ಇತರರು ಇದ್ದರು.
Published on

ನೇಸರಗಿ: ಪ್ರತಿ ವಿದ್ಯಾರ್ಥಿಯೂ ಕೌಶಲ ವೃದ್ಧಿಸಿಕೊಂಡಾಗ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದ 2022-23ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್‌ಎಸ್‌ಎಸ್ ಚಟುವಟಿಕೆಗಳ ಹಾಗೂ ಬಿಎ ಹಾಗೂ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ನಿರಂತರ ಅಧ್ಯಯನ ಕೈಗೊಂಡರೆ ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯ. ಇಂದಿನ ಯುಗದಲ್ಲಿ ಮಾತನಾಡುವ ಕೌಶಲ ಹಾಗೂ ಇಂಗ್ಲಿಷ್ ಭಾಷಾ ಕೌಶಲ ಬೆಳೆಸಿಕೊಂಡರೆ ಜಗತ್ತಿನ ಎಲ್ಲೆಡೆ ಹೋದರೂ ಜೀವನ ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು.

ವಿಶೇಷ ಉಪನ್ಯಾಸಕರಾಗಿ ಕಲಾದಗಿ ಸರ್ಕಾರಿ ಪದವಿ ಕಾಲೇಜ್ ಸಹಾಯಕ ಪ್ರಾಧ್ಯಾಪಕ ಸಂಪತ ಲಮಾಣಿ ಮಾತನಾಡಿ, ದೇಶದ ಭವಿಷ್ಯ ಯುವಕರ ಕೈಯಲ್ಲಿದೆ. ಯಶಸ್ಸಿನ ಹಾದಿ ಕೈಗೂಡಲು ನಿರಂತರ ಅಧ್ಯಯನ ಕೈಗೊಳ್ಳಬೇಕೆಂದರು.

ಪ್ರಾಂಶುಪಾಲ ವಿನಯ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿ ಜೀವನದಲ್ಲಿ ಶೈಕ್ಷಣಿಕವಾಗಿ ಪ್ರಗತಿಯತ್ತ ಸಾಗಲು ಅಧ್ಯಯನ ತುಂಬ ಮುಖ್ಯವಾಗಿದೆ ಎಂದರು.

ಡಾ.ಫಕೀರನಾಯ್ಕ ಗಡ್ಡಿಗೌಡರ, ಪ್ರೊ.ಎಂ.ಬಿ.ಕೊಪ್ಪದ, ಪ್ರೊ.ಎಸ್.ಎಸ್.ಹಿರೇಮಠ, ಶ್ರೀದೇವಿ ನರವಡೆ, ಪಿಎಸ್‌ಐ ವೈ.ಎಲ್.ಶೀಗಿಹಳ್ಳಿ, ನಿಂಗಪ್ಪ ಅರಕೇರಿ, ಮಹಾಂತೇಶ ಸತ್ತಿಗೇರಿ, ಬಸವರಾಜ ಚಿಕ್ಕನಗೌಡ್ರ, ಚನಗೌಡ ಪಾಟೀಲ, ಮಲ್ಲಿಕಾರ್ಜುನ ಕುಂಬಾರ, ಡಾ.ಪದ್ಮಾ ಹೊಸಕೋಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net