ಕೌಶಲ ತರಬೇತಿ ಪಡೆದು ಸ್ವಾವಲಂಬಿಗಳಾಗಿ

22 HBD 3
 ಹುಮನಾಬಾದ್‌ನ ಐಟಿಐ ಕಾಲೇಜಿನಲ್ಲಿ ಉದ್ಯೋಗ ಅವಿಷ್ಕಾರ ಯೋಜನೆಯಡಿ ಹಮ್ಮಿಕೊಂಡಿದ್ದ ತರಬೇತಿಯನ್ನು ತಾಪಂ ಇಒ ದಿಪೀಕಾ ನಾಯ್ಕರ್ ಉದ್ಘಾಟಿಸಿದರು. ಶಿವಕುಮಾರ ಧನಶೆಟ್ಟಿ, ಸಾಯಿಬಣ್ಣ, ಲಕ್ಷ್ಮೀಪುತ್ರ ಮಾಳಗೆ ಇತರರಿದ್ದರು.
Published on

ಹುಮನಾಬಾದ್: ಕೌಶಲ ತರಬೇತಿ ಪಡೆದು ಎಲ್ಲರೂ ತಮ್ಮ ಸ್ವಂತ ಶಕ್ತಿ ಮೇಲೆ ನಿಂತು ಸ್ವಾವಲಂಬಿಗಳಾಗಬೇಕೆಂದು ತಾಲೂಕು ಪಂಚಾಯಿತಿ ಇಒ ದಿಪೀಕಾ ನಾಯ್ಕರ್ ಹೇಳಿದರು.

ಪಟ್ಟಣದ ಶ್ರೀ ವೀರಭದ್ರೇಶ್ವರ ಐಟಿಐ ಕಾಲೇಜಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ), ಕೌಶಲಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಯ ಇಲಾಖೆ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಬೀದರ್ ಇವರ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉದ್ಯೋಗ ಅವಿಷ್ಕಾರ ಯೋಜನೆಯಡಿ ಉಚಿತ ಎಲೆಕ್ಟ್ರಿಕಲ್ ಹೋಮ್ ಅಪ್ಲ್ಯಿಯನ್ಸ್​ ರಿಪೇರಿ ಆಂಡ್ ಸರ್ವಿಸಿಂಗ್ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿಡಾಕ್ ಸಂಸ್ಥೆಯ ಇಂತಹ ತರಬೇತಿಗಳು ಇಂದಿನ ಯುವಕ, ಯುವತಿಯರಿಗೆ ಸಹಾಯಕವಾಗಲಿದೆ, ತಾವೆಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಸಿಡಾಕ್ ಸಂಸ್ಥೆಯ ಹಿರಿಯ ಉಪನ್ಯಾಸಕ ಸೈಯದ್ ಅಶ್ಪಕ್ ಅಹ್ಮದ್ ಪ್ರಾಸ್ತಾವಿಕ ಮಾತನಾಡಿದರು.

ಶುಪಾಲ ಶಿವಕುಮಾರ ಧನಶೆಟ್ಟಿ, ವಿಶ್ವನಾಥ ಬಿರಾದಾರ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಲಕ್ಷ್ಮೀಪುತ್ರ ಮಾಳಗೆ ಇತರರಿದ್ದರು. ತರಬೇತಿ ಅಧಿಕಾರಿ ಸಾಯಿಬಣ್ಣ ಬ್ಯಾಳೋಳೆ ಸ್ವಾಗತಿಸಿದರು. ಅಮಾದೀಪ ಕುಲ್ಕರ್ಣಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net