

ಗುಳೇದಗುಡ್ಡ: ಗುಡಿ ಹಾಗೂ ಸಣ್ಣ ಕೈಗಾರಿಕೆಗಳಲ್ಲಿ ನಿರತರಾದವರಿಗೆ ಕೌಶಲ ತರಬೇತಿ ನೀಡುವುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.
ಕೋಟೆಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಪಟ್ಟಣದ ಚೌ ಬಜಾರದಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರ ಉದ್ಘಾಟನೆ ಹಾಗೂ ಕಮತಗಿಯ ಮುಖ್ಯರಸ್ತೆಯಲ್ಲಿ ನಬಾರ್ಡ್ ಯೋಜನೆಯಡಿ ನಿರ್ಮಾಣಗೊಂಡಿರುವ ಕೈಮಗ್ಗ ನೇಕಾರರ ಉತ್ಪನ್ನಗಳ ಉತ್ಪಾದನಾ ಕೇಂದ್ರದ ಅಡಿಯಲ್ಲಿ ಕೌಶಲ ಅಭಿವೃದ್ಧಿ ತರಬೇತಿ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಕೈಮಗ್ಗ ಬಟ್ಟೆಗಳಿಗೆ ಬೇಡಿಕೆ ಹಾಗೂ ಬೆಲೆ ಬರುತ್ತಿದೆ. ನೇಕಾರರಿಗೆ ಹೊಸ ವಿನ್ಯಾಸ, ತಂತ್ರಜ್ಞಾನದ ಕೌಶಲ ಅಭಿವೃದ್ಧಿ ತರಬೇತಿ ನೀಡಿದಲ್ಲಿ ನೇಯ್ಗೆಯಲ್ಲಿ ಉತ್ತಮ ವಿನ್ಯಾಸ, ಗುಣಮಟ್ಟ ಹೆಚ್ಚುತ್ತದೆ. ಇದರಿಂದ ಕೈಮಗ್ಗ ಬಟ್ಟೆಗಳಿಗೆ ಇನ್ನಷ್ಟು ಬೇಡಿಕೆ, ಬೆಲೆ ಬರುತ್ತದೆ ಎಂದರು.
ಕೋಟೆಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹನುಮಂತ ಮಾವಿನಮರದ ಮಾತನಾಡಿದರು.
ಮುರುಘಾಮಠದ ಶ್ರೀ ಕಾಶಿನಾಥ ಸ್ವಾಮಿಗಳು, ಗುರುಸಿದ್ಧೇಶ್ವರ ಮಠದ ಶ್ರೀ ಜ. ಗುರುಸಿದ್ಧ ಪಟ್ಟದಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಮಾರಗೌಡ ಜನಾಲಿ, ಸಹಕಾರ ಸಂಘಗಳ ಅಪರ ನಿಬಂಧಕ ಎಸ್.ಎನ್. ನೀಲಪ್ಪನವರ, ಬೆಳಗಾವಿ ಪ್ರಾಂತದ ಸಹಕಾರ ಸಂಘಗಳ ಸಂಯುಕ್ತ ನಿಬಂಧಕ ಡಾ. ಸುರೇಶಗೌಡ ಪಾಟೀಲ, ಡಿಡಿಎಂ ನಬಾರ್ಡ್ ಮಂಜುನಾಥ ರೆಡ್ಡಿ, ಸಹಕಾರ ಸಂಘಗಳ ಉಪನಿಬಂಧಕ ದಾನಯ್ಯ ಹಿರೇಮಠ, ರಮೇಶ ಅಯೋದಿ, ಸಂಘದ ಉಪಾಧ್ಯಕ್ಷ ಲಕ್ಷ್ಮ್ಮಣ ಹಾಲನ್ನವರ, ಸದಸ್ಯರಾದ ಸಂಗಪ್ಪ ಹಡಪದ, ಯಲಗುರ್ದಪ್ಪ ತೊಗಲಂಗಿ, ನಾಗಪ್ಪ ಮುರಗೋಡ, ಮಳಿಯಪ್ಪ ಹಾವರ, ಯಮನಪ್ಪ ರಾಠೋಡ, ಸಂತೋಷ ತಿಪ್ಪಾ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೋಹನ ಕಲ್ಯಾಣೆ, ಸಂತೋಷ ನಾಯನೇಗಲಿ, ಶ್ರೀಕಾಂತ ಹುನಗುಂದ, ಸಚಿನ್ ರಾಂಪೂರ ಮತ್ತಿತರರು ಇದ್ದರು.