ಕೌಶಲ ಉಳ್ಳವರಿಗೆ ಹೆಚ್ಚಿನ ಉದ್ಯೋಗಾವಕಾಶ

09M.D.R.3
ಮದ್ದೂರಿನ ಎಚ್.ಕೆ. ವೀರಣ್ಣಗೌಡ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ 2021-22ನೇ ಸಾಲಿನ ಪದವಿ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾರ್ಯದರ್ಶಿ ಜಯರಾಮು ರಾಯ್‌ಪುರ ಅವರನ್ನು ಸನ್ಮಾನಿಸಲಾಯಿತು. ಡಿ.ಸಿ.ತಮ್ಮಣ್ಣ, ಪಿ.ಪ್ರದೀಪ್, ಜಯಪ್ರಕಾಶ್‌ಗೌಡ, ಕೆ.ಟಿ.ಚಂದು, ಸ್ವರೂಪ್‌ಚಂದ್ ಇದ್ದರು.
Published on

ಮದ್ದೂರು: ಇಂದಿನ ಶಿಕ್ಷಣ ಕೇವಲ ಅಂಕ ಗಳಿಕೆ ಮೇಲೆ ನಿಂತಿದೆ. ಪದವಿ ಪಡೆದಾಕ್ಷಣ ಸರ್ಕಾರವೇ ಉದ್ಯೋಗ ನೀಡಬೇಕೆಂಬ ಆಸೆ ಬದಿಗೊತ್ತಿ ಸ್ವಂತ ಕೆಲಸ ಕಲಿತು ಬದುಕು ಕಟ್ಟಿಕೊಳ್ಳಬೇಕು ಎಂದು ಶಾಸಕ ಡಿ.ಸಿ.ತಮ್ಮಣ್ಣ ಕಿವಿಮಾತು ಹೇಳಿದರು.

ಪಟ್ಟಣದ ಎಚ್.ಕೆ. ವೀರಣ್ಣಗೌಡ ಪದವಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ 2021-22ನೇ ಸಾಲಿನ ಪದವಿ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಶಿಕ್ಷಣದ ಜತೆಗೆ ಕೌಶಲ ಸಹ ಅಗತ್ಯ. ಉತ್ತಮ ಕೌಶಲ ಇರುವವರಿಗೆ ಸಾಕಷ್ಟ ಉದ್ಯೋಗಾವಕಾಶಗಳಿವೆ ಎಂದರು.

ಬೆಂಗಳೂರಿನ ಬಿಬಿಎಂಪಿ ಆಯುಕ್ತ ಹಾಗೂ ಮುಖ್ಯಮಂತ್ರಿಗಳ ಕಾರ್ಯದರ್ಶಿ ಜಯರಾಮು ರಾಯ್‌ಪುರ ಮಾತನಾಡಿ, ವಿದ್ಯೆ ಕೇವಲ ವೃತ್ತಿಗಷ್ಟೇ ಸೀಮಿತವಾಗದೆ ಜ್ಞಾನ ಪರಂಪರೆಯನ್ನು ಗೌರವಿಸುವಂತಾಗಬೇಕೆಂದರು.

ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಜಯರಾಮು ರಾಯ್‌ಪುರ ಮತ್ತು ಶಾಸಕ ಡಿ.ಸಿ.ತಮ್ಮಣ್ಣ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಸಿ.ಅಪೂರ್ವಚಂದ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್‌ಗೌಡ, ಸಂಸ್ಥೆಯ ಗೌರವಾಧ್ಯಕ್ಷ ಕೆ.ಟಿ.ಚಂದು, ಅಧ್ಯಕ್ಷ ಸ್ವರೂಪ್‌ಚಂದು, ನಿರ್ದೇಶಕರಾದ ಬೋರಯ್ಯ, ಮಲ್ಲಿಕಾರ್ಜುನ್, ರಾಮಲಿಂಗಯ್ಯ, ಕಸಾಪ ತಾಲೂಕು ಅಧ್ಯಕ್ಷ ಕೋಣಸಾಲೆ ಸುನೀಲ್‌ಕುಮಾರ್, ಪ್ರಾಂಶುಪಾಲರಾದ ಜಿ.ಎಸ್. ಶಂಕರೇಗೌಡ, ಯು.ಎಸ್. ಶಿವಕುಮಾರ್, ಪ್ರೊ ಪ್ರಕಾಶ್, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net