ಕೌಶಲ- ಉದ್ಯೋಗಾಧಾರಿತ ಅಭಿಯಾನ, ಉಪಯೋಗ ಪಡೆದುಕೊಳ್ಳಲು ಮನವಿ

333
Published on
ಹಾಸನ: ನಗರದ ಸರ್ಕಾರಿ ಕಲಾ ಮತ್ತು ವಾಣಿಜ್ಯ (ಸ್ವಾಯತ್ತ) ಕಾಲೇಜಿನಲ್ಲಿ 2ನೇ ವರ್ಷದ ವಿಶೇಷ ಅಭಿಯಾನದಡಿ ಪ್ರವೇಶಾತಿ ಅಭಿಯಾನ ಆರಂಭವಾಗಿದೆ ಎಂದು ಪ್ರಾಂಶುಪಾಲರಾದ ಡಾ.ಎಂ.ಬಿ. ಇರ್ಷಾದ್ ತಿಳಿಸಿದರು.
 ಮೊದಲ ವರ್ಷದಲ್ಲಿ ಪಿಯುಸಿ ಮುಗಿಸಿದ 23 ವಿದ್ಯಾರ್ಥಿಗಳು ಪ್ರವೇಶ ಪಡೆದು ಕೌಶಲ ಹಾಗೂ ಉದ್ಯೋಗಾಧಾರಿತ ಹೊಸ ಕೋರ್ಸ್ ತರಬೇತಿ ಪಡೆಯುತ್ತಿದ್ದಾರೆ. ಈ ವರ್ಷ 70 ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲು ಉದ್ದೇಶಿಸಲಾಗಿದೆ. ಈ ರೀತಿಯ ಸೌಲಭ್ಯ ಇರುವುದು ಇಡೀ ಜಿಲ್ಲೆಯಲ್ಲಿ ನಮ್ಮ ಕಾಲೇಜಿನಲ್ಲಿ ಮಾತ್ರ. ಮಕ್ಕಳು ಇದರ ಉಪಯೋಗ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಗುರುವಾರ ಸುದ್ದಿಗೋಷ್ಠಿಯಲ್ಲಿ  ಸಲಹೆ ನೀಡಿದರು.
ಇಂದಿನಿಂದಲೇ ಪ್ರವೇಶಾತಿ ಆರಂಭವಾಗಿದೆ. ಅರ್ಹ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು, ಸರ್ಕಾರದ ಈ ಸೌಲಭ್ಯ ಬಳಿಸಿಕೊಳ್ಳಬೇಕು. ಪ್ರವೇಶಾತಿ ಪಡೆಯುವ ಮಕ್ಕಳಿಗೆ ಮೊದಲ 2 ವರ್ಷ ವಿಶೇಷ ತರಬೇತಿ ಸಿಗಲಿದೆ. ನಂತರ ಈಗಾಗಲೇ ನಾವು ಎಂಒಯು ಮಾಡಿಕೊಂಡಿರುವ ಕಂಪನಿಗಳು ಆಯ್ಕೆ ಮಾಡಿಕೊಂಡು ಸ್ಟೈಫಂಡ್ ನೀಡುವುದರ ಜತೆಗೆ ಉದ್ಯೋಗವನ್ನೂ ಕಲ್ಪಿಸಲಿದೆ ಎಂದು ಹೇಳಿದರು.
ಈ ರೀತಿಯ ಹೊಸ ಕೋರ್ಸ್‌ಗೆ ಜಿಲ್ಲಾಧಿಕಾರಿ ಅವರು ಚಾಲನೆ ನೀಡಿದ್ದಾರೆ. ಮೇ 24 ರಂದು ನಮ್ಮ ಕಾಲೇಜು ಆವರಣದಲ್ಲಿ ರಾಜ್ಯಮಟ್ಟದ 2 ದಿನಗಳ ಖೋ ಖೋ ಹಾಗೂ ವಾಲಿಬಾಲ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಮುರಳೀಧರ್, ಅಭಿಯಾನದ ಸಂಯೋಜಕ ಪಾರ್ಥೇಶ್, ಪತ್ರಾಂಕಿತ ಲೆಕ್ಕಾಧಿಕಾರಿ ಸತ್ಯಮೂರ್ತಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net