ಕೌದಿ ಪೂಜೆಯೊಂದಿಗೆ ಮಹಾಶಿವರಾತ್ರಿಗೆ ತೆರೆ

Koudipooje
Published on

ಚಿತ್ರದುರ್ಗ: ಕಬೀರಾನಂದಾಶ್ರಮದ 94ನೇ ವರ್ಷದ ಮಹಾ ಶಿವರಾತ್ರಿ ಮಹೋತ್ಸವ ಕೌದಿ ಪೂಜೆಯೊಂದಿಗೆ ಶನಿವಾರ ತೆರೆ ಕಂಡಿತು.

ಶಿವಲಿಂಗಾನಂದ ಶ್ರೀ ರುದ್ರಾಕ್ಷಿ ಕಿರೀಟ, ಚಿಂದಿ ವಸ್ತ್ರ ಧರಿಸಿ, ಕಮಂಡಲ, ಮಣ್ಣಿನ ತಟ್ಟೆ ಕೈಯಲ್ಲಿಡಿದು, ಭಕ್ತರಿಂದ ಕಾಣಿಕೆ ಸ್ವೀಕರಿಸಿ, ಮಠದ ಆವರಣದಲ್ಲಿ ಮೂರು ಸುತ್ತು ಪ್ರದಕ್ಷಿಣೆ ಹಾಕುವ ಮೂಲಕ ಸಂಪ್ರದಾಯದಂತೆ ಕೌದಿ ಪೂಜೆ ನೆರವೇರಿಸಿದರು.

ನಾಗರಾಜ್ ಸಂಗಂ, ಪ್ರಶಾಂತ್, ಸತೀಶ್, ಗೋಪಾಲಸ್ವಾಮಿ ನಾಯಕ, ಪೈಲ್ವಾನ್ ತಿಪ್ಪೇಸ್ವಾಮಿ, ನಿರಂಜನ, ಗಣಪತಿ ಶಾಸ್ತ್ರಿ, ತಿಪ್ಪೇಸ್ವಾಮಿ, ಗಾಯತ್ರಿ ಶಿವರಾಂ, ರೇಖಾ, ವೆಂಕಟೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net