

ಚಿತ್ರದುರ್ಗ: ನಗರದ ಕಬೀರಾನಂದಾಶ್ರಮದ 95ನೇ ವರ್ಷದ ಮಹಾ ಶಿವರಾತ್ರಿ ಮಹೋತ್ಸವ ಕೌದಿ ಪೂಜೆಯೊಂದಿಗೆ ಗುರುವಾರ ತೆರೆ ಕಂಡಿತು. ಕೊನೆಯ ದಿನ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಅವರು ಕೌದಿ ವಸ್ತ್ರ ಧಾರಣೆಯೊಂದಿಗೆ ಭಕ್ತರಿಗೆ ದರ್ಶನಾಶೀರ್ವಾವಾದ ನೀಡಿದರು.
ರುದ್ರಾಕ್ಷಿ ಕಿರೀಟ ಧರಿಸಿದ್ದ ಶ್ರೀಗಳು, ಒಂದು ಕೈಯಲ್ಲಿ ಕಮಂಡಲ, ಮತೊಂದು ಕೈಯಲ್ಲಿ ಮಣ್ಣಿನ ತಟ್ಟೆ ಹಿಡಿದು ಭಕ್ತರಿಂದ ಕಾಣಿಕೆ ಸ್ವೀಕರಿಸಿದರು. ಮಠದ ಆವರಣದಲ್ಲಿ ಮೂರು ಸುತ್ತು ಪ್ರದಕ್ಷಿಣೆ ಹಾಕುವುದರೊಂದಿಗೆ ಕೌದಿ ಪೂಜೆಗೆ ಮಂಗಳ ಹಾಡಲಾಯಿತು. ಈ ಸಮಯದಲ್ಲಿ ಆಪಾರ ಸಂಖ್ಯೆ ಭಕ್ತರು ಇದ್ದರು.
ಜಾತಿ, ವರ್ಗ ಬೇಧವಿಲ್ಲದೆ, ಸಕಲ ಜೀವಾತ್ಮಾರಿಗೆ ಲೇಸನ್ನು ಬಯಸುವ ಕೌದಿ ಪೂಜೆ ಬಹಳಷ್ಟು ವರ್ಷಗಳಿಂದ ಸಾಗಿ ಬಂದಿರುವ ಪರ ಂಪರೆಯಾಗಿದೆ ಎಂದು ಶ್ರೀಗಳು ಆಶೀರ್ವಚನದಲ್ಲಿ ತಿಳಿಸಿದರು.
ಮಹೋತ್ಸವ ಸಮಿತಿ ಅಧ್ಯಕ್ಷ ವಿಜಯಕುಮಾರ್, ನಾಗರಾಜ್‌ಸಂಗಂ, ಸತೀಶ್, ಗೋಪಾಲಸ್ವಾಮಿ ನಾಯ್ಕ, ಪೈಲ್ವಾನ್‌ತಿಪ್ಪೇಸ್ವಾಮಿ, ಪ್ರಶಾಂತ್, ಪ್ರತಾಪ್‌ಜೋಗಿ, ಚಿನ್ಮಯಾನಂದ, ನಿರಂಜನ, ಗಣಪತಿ ಶಾಸ್ತ್ರಿ, ತಿಪ್ಪೇಸ್ವಾಮಿ, ಶಿವರಾಂ, ರೇಖಾ, ವೆಂಕಟೇಶ್ ಇತರರು ಇದ್ದರು.