ಕೌಡಗಾಂವ್‌ನಲ್ಲಿ ಸರಣಿ ಮನೆ ಕಳ್ಳತನ

Crime Logo
Published on

ಔರಾದ್: ಕೌಡಗಾಂವ್ ಗ್ರಾಮದಲ್ಲಿ ಒಂದೇ ದಿನ ಆರು ಮನೆಗಳಲ್ಲಿ ಸರಣಿ ಕಳ್ಳತನ ಶನಿವಾರ ರಾತ್ರಿ ನಡೆದಿದೆ. ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಜನರು ಭಜನೆ ಮಾಡಲು ಹೋದಾಗ ಘಟನೆ ನಡೆದಿದೆ ಎನ್ನಲಾಗಿದೆ. ರಾಜಕುಮಾರ ವಗ್ಗೆ ಅವರ ಮನೆಯಲ್ಲಿನ ಎರಡು ಲಕ್ಷ ರೂ. ಮತ್ತು ೧೫ ಗ್ರಾಂ ಬಂಗಾರ, ಸತೀಶ ಅವರ ಮನೆಯಲ್ಲಿ ಐದು ಸಾವಿರ ರೂ., ಐದು ಗ್ರಾಂ ಬಂಗಾರ ಕಳ್ಳತನವಾಗಿದೆ. ಇನ್ನುಳಿದ ಮನೆಗಳಲ್ಲಿ ಏನು ದೊರಕಿಲ್ಲ ಎಂದು ಪಿಎಸ್‌ಐ ಮೆಹೆಬೂಬ್ ಅಲಿ ತಿಳಿಸಿದ್ದಾರೆ. ಸಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net