

ಗೋಣಿಕೊಪ್ಪ: ಮಾಯಮುಡಿ ಮಾನಿಲ್ ಅಯ್ಯಪ್ಪ ಮೈದಾನದಲ್ಲಿ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ, ಯುವಕ ಸಂಘ, ಕೊಡವ ಕೂಟ ಮತ್ತು ಅಖಿಲ ಅಮ್ಮ ಕೊಡವ ಸಮಾಜದ ವತಿಯಿಂದ ಆಯೋಜಿಸಿದ್ದ ಕೌಟುಂಬಿಕ ವಾಲಿಬಾಲ್ ಟೂರ್ನಿಯನ್ನು ಶನಿವಾರ ಹಿರಿಯರಾದ ಚೆಪ್ಪುಡೀರ ಪಿ.ಅಯ್ಯಪ್ಪ, ದಾನಿ ಸಣ್ಣುವಂಡ ಸರೋಜಾ ಕಾವೇರಪ್ಪ ಉದ್ಘಾಟಿಸಿದರು.
ದಾನಿ ಸಣ್ಣುವಂಡ ವಿನಯ್ ಅಯ್ಯಪ್ಪ, ಸಣ್ಣುವಂಡ ಬಿನಿಲ್ ಗಣಪತಿ, ಆಪಟ್ಟೀರ ಸಿ.ಜಾನಕ್ಕಿ, ಆಪಟ್ಟೀರ ಎಸ್.ನಾಚಯ್ಯ ಇದ್ದರು. ಮಂಡುವಂಡ, ಸಣ್ಣುವಂಡ, ಮನೆಯಪಂಡ, ಬಲ್ಯಂಡ, ಅಪ್ಪುಡ, ಮಾಚಂಗಡ, ಆಪಟ್ಟೀರ, ಚಿಯಕ್‌ಪೂವಂಡ, ಮುಂಡಚಾಡಿರ, ಮಲ್ಲಂಗಡ, ಚೆರುವಾಳಂಡ, ಬಾಳೆಯಡ, ಮಲ್ಲಮಾಡ, ಚಿರಿಯಪಂಡ, ಮಲ್ಲೇಂಗಡ, ಮಂದನೆರವಂಡ, ಬೊಟ್ಟಂಗಡ, ಅಮ್ಮಂಡ ತಂಡಗಳು ಸೆಣೆಸಾಟ ನಡೆಸಿದವು.