

ಬೆಳವಣಿಕಿ (ತಾ.ರೋಣ): ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಮೀಪದ ಕೌಜಗೇರಿ ಗ್ರಾಮದ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದ್ದು ಸುಗಮ ಸಂಚಾರಕ್ಕೆ ಸಂಕಷ್ಟ ಉಂಟಾಗಿದೆ.
ಗ್ರಾಮದ 1ನೇ ವಾರ್ಡ್ನ ಜಂತ್ಲಿಯವರ ಓಣಿ ಹಾಗೂ 2ನೇ ವಾರ್ಡ್ನ ತಳವಾರ ಓಣಿಯ ರಸ್ತೆಯಲ್ಲಿ ನೀರು ನಿಂತು ನಡೆದಾಡಲು ಆಗುತ್ತಿಲ್ಲ. ಮಳೆಯಿಂದಾಗಿ ಅಲ್ಲಲ್ಲಿ ತಗ್ಗು-ಗುಂಡಿಗಳು ಬಿದ್ದಿವೆ. ನಿಂತ ನೀರಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಜನರ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುತ್ತಿವೆ. ಕೂಡಲೆ ರಸ್ತೆ ದುರಸ್ತಿ ಮಾಡಬೇಕು ಎಂದು ಗ್ರಾಮಸ್ಥರಾದ ಶಿವರಾಜ ಕುಂಬಾರ, ಮರಿಗೌಡ ಶಿವಳ್ಳಿ, ನಾಗರಾಜ ಸುರಕೋಡ, ರಾಕೇಶ ಭೂಮನಗೌಡ್ರ, ಬಸವರಾಜ ಸಜ್ಜನರ, ಯಾಸೀನ್ ನದಾಫ್, ಎಸ್.ಜಿ. ಕಲಹಾಳ, ಬಸವರಾಜ ಕುಂಬಾರ, ಇತರರು ಒತ್ತಾಯಿಸಿದ್ದಾರೆ.