ಕೋವಿಡ್ಗೆ ತುತ್ತಾದ ನೌಕರ ಕುಟುಂಬಕ್ಕೆ 50 ಲಕ್ಷ ರೂ.ಕೊಡಿ

2608Klb01
Published on

ಕಲಬುರಗಿ: ಕೋವಿಡ್-19ಗೆ ತುತ್ತಾದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯ ಪ್ರಯೋಗ ಶಾಲೆಯ ಹಿರಿಯ ತಂತ್ರಜ್ಞ ಅಬ್ದುಲ್ ಅಜೀಮ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಒದಗಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಆಗ್ರಹಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ, ಕರೊನಾ ಕೆಲಸಕ್ಕೆ ನಿಯೋಜನೆಗೊಂಡು ಸೋಂಕು ತಗುಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ. ಮೈಸೂರು ಜಿಲ್ಲೆಯ ನಂಜನಗೂಡ ತಾಲೂಕು ವೈದ್ಯಾಧಿಕಾರಿ ಮರಣದ ನಂತರ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಿದ ಮಾದರಿಯಲ್ಲಿ ಇಲ್ಲಿನ ನೌಕರರ ಕುಟುಂಬಕ್ಕೂ ನೀಡಬೇಕು, ಮೃತರ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಕೋರಿದ್ದಾರೆ.
ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳರಿಗೆ ಮನವಿ ಸಲ್ಲಿಸಿದರು. ವೆಂಕಟರಾವ ಇಟಗಿ, ಹಣಮಂತರಾಯ ಗೊಲಸಾರ, ಗಣೇಶ ಕಮ್ಮಾರ, ಚಂದ್ರಕಾಂತ ಏರಿ, ಸೈಯದ್ ನಿಸ್ಸಾರ್ ಅಹ್ಮದ್, ಸಿದ್ದಲಿಂಗಯ್ಯ ಮಠಪತಿ, ಮಲ್ಲಿಕಾರ್ಜುನ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net