ಕೋವಿಡ್ ಭಯ ಬೇಡ

tho1--0008
Published on

ಚಿತ್ರದುರ್ಗ:ನಗರದ ವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಬುಧವಾರ ಕೋವಿಡ್ ಬೂಸ್ಟರ್ ಲಸಿಕಾ ಕಾರ‌್ಯಕ್ರಮ ಏರ್ಪಡಿಸಲಾಗಿ ತ್ತು. ಈ ವೇಳೆ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಅವರು, ಕೋವಿಡ್ ಜೆಎನ್.1ಕುರಿತಂತೆ ಆತಂಕ ಬೇಡ, ಮುಂಜಾಗ್ರತೆ ಇರಲಿ. ಅರ್ಹರು ಮುಂಜಾಗ್ರತಾ ಲಸಿಕೆ ಪಡೆಯ ಬೇಕು. ಸಾರ್ವಜನಿಕರಿಗೆ ಅನುಕೂಲವಾಗಲೆಂದು ಜಿಲ್ಲಾ ಆಸ್ಪತ್ರೆ ಕೊ ಠಡಿ ಸಂಖ್ಯೆ-23ರಲ್ಲಿ ಲಸಿಕಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ,ಈ ಹಿಂದೆ ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಲಸಿಕೆ ಪಡೆದಿದ್ದರೂ ಸಹ ಕಾರ್ಬಿವ್ಯಾಕ್ಸ್ ಲಸಿಕೆ ಪಡೆಯಬಹುದಾಗಿದೆ ಎಂದರು. ವಿದ್ಯಾಸಂಸ್ಥೆ ಅಧ್ಯಕ್ಷ ಸತ್ಯನಾರಾಯಣಶೆಟ್ಟಿ ಮಾತನಾಡಿದರು. ಪಿ.ಎಲ್.ಸುರೇಶ್‌ರಾಜ್,ಅಜಯಕುಮಾರ,ಮೋಹನ್‌ಕುಮಾರ್ ಗುಪ್ತ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರಂಗಾರೆಡ್ಡಿ, ಗಂಗಾಧರ ರೆಡ್ಡಿ,ಗೋಪಾಲಕೃಷ್ಣ,ಶಶಾಂಕ್,ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಮಂಜುಳಾ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net