

ಚಾಮರಾಜನಗರ: ಪ್ರತಿಯೊಬ್ಬರೂ 3ನೇ ಡೋಸ್ ಲಸಿಕೆ ಪಡೆಯುವ ಮೂಲಕ ಕೋವಿಡ್ ತಡೆಗಟ್ಟಲು ಸಹಕರಿಸಬೇಕು ಎಂದು ನಗರಸಭೆ ಅಧ್ಯಕ್ಷೆ ಆಶಾ ನಟರಾಜು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರಸಭೆ, ಯುನಿಸ್ೆ ಮತ್ತು ಆರೋಗ್ಯ ನಿರ್ವಹಣಾ ಸಂಶೋಧನಾ ಸಂಸ್ಥೆ ಹಾಗೂ ಎಸ್‌ಬಿಸಿಸಿ ಘಟಕದ ಸಹಯೋಗದಲ್ಲಿ ಮಂಗಳವಾರ ನಗರದ ನಗರಸಭೆ ಮುಂಭಾಗ ಆಯೋಜಿಸಿದ್ದ ಸಾರ್ವಜನಿಕರಿಗೆ ಡೋಸ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಆರೋಗ್ಯ ಇಲಾಖೆಯಿಂದ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, 18 ವರ್ಷ ಮೇಲ್ಪಟ್ಟವರು 2ನೇ ಡೋಸ್ ಲಸಿಕೆ ಪಡೆದಿದ್ದರೆ ಮೂರನೇ ಡೋಸ್ ಅನ್ನು ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಪಡೆಯಬೇಕು ಎಂದರು. ಎಸ್‌ಬಿಸಿಸಿ ಘಟಕದ ಜಿಲ್ಲಾ ಸಂಯೋಜಕ ಟಿ.ಜೆ.ಸುರೇಶ್, ಹಿರಿಯ ಆರೋಗ್ಯ ನಿರಿಕ್ಷಕರಾದ ಮಂಜು, ಶಿವರಾಜೇಂದ್ರ, ನಾಗೇಶ್, ಗುರುಮೂರ್ತಿ, ಮಹೇಶ್, ಶಿವು, ಅಜೀತ್, ಪ್ರಭು, ಗಂಗಾ ಇತರರು ಇದ್ದರು.