ಕೋವಿಡ್, ಉಸ್ತುವಾರಿ ಸಚಿವರಿಂದ ಸಭೆ

46249feb-39bd-4803-bd0c-52286ca63608===01
Published on

ಚಿತ್ರದುರ್ಗ:ಕೋವಿಡ್ ಜೆಎನ್.ಒನ್ ತಳಿ ಜಿಲ್ಲೆಯಲ್ಲಿ ಈವರೆಗೆ ಪತ್ತೆ ಆಗಿಲ್ಲವೆಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ. ಜಿಲ್ಲಾ ಉ ಸ್ತುವಾರಿ ಸಚಿವ ಡಿ.ಸುಧಾಕರ್ ಅವರು, ಶನಿವಾರ ಡಿಸಿ ಕಚೇರಿಯಲ್ಲಿ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣ ಕುರಿತು ಸಮಾಲೋಚನೆ ನಡೆಸಿದರು.
60 ವರ್ಷ ಮೀರಿದ, ಲಿವರ್,ಕಿಡ್ನಿ ಮೊದಲಾದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ,ಟ್ರಾವೆಲ್ ಹಿಸ್ಟರಿ ಇರುವಂಥವರಿಗೆ ಹಾಗೂ ರೋಗ ಲಕ್ಷಣ ಅಧಿಕವಿರುವಂಥವರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಈವರೆಗೆ ಜೆಎನ್.ಒನ್.ಪತ್ತೆಯಾಗಿಲ್ಲವೆಂದು ಆರೋಗ್ಯಾಧಿಕಾರಿಗಳು ತಿಳಿಸಿದರು.
ಡಿಸಿ ಜಿಆರ್‌ಜೆ ದಿವ್ಯಾಪ್ರಭು ಜಿಲ್ಲೆಯಲ್ಲಿ ಮೆಡಿಕಲ್ ಆಕ್ಸಿಜನ್ ಪ್ಲಾಂಟ್,ಸಿಲಿಂಡರ್ ಇತ್ಯಾದಿ ಸೌಕರ್ಯ ಕುರಿತು ವಿವರಿಸಿದರು. ನರ್ಸ್ ಗಳ ಕೊರತೆ, ಅವರಿಗೆ ವೇತನ ಪಾವತಿ ಬಾಕಿ ಕುರಿತು ಸಭೆ ಚರ್ಚಿಸಿತು. ಎಸ್‌ಪಿ ಧರ್ಮೆಂದರ್‌ಕುಮಾರ್ ಮೀನಾ,ಎಡಿಸಿ ಬಿ.ಟಿ. ಕುಮಾರ ಸ್ವಾಮಿ, ಡಿಎಚ್‌ಒ ಡಾ.ರೇಣುಪ್ರಸಾದ್, ಡಾ.ಕಂಬಾಳಿಮಠ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net