

ಚಾಮರಾಜನಗರ: ತಾಲೂಕಿನ ಪುನಜನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಳಿಪಾಳ್ಯ, ಕುಳ್ಳೂರು ಗ್ರಾಮದ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಬುದವಾರ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಟಿ.ಎಸ್.ಪಿ ಯೋಜನೆಯಲ್ಲಿ ಕುಳ್ಳೂರು ಗ್ರಾಮದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿ ನಿರ್ಮಾಣಕ್ಕೆ 50 ಲಕ್ಷ ರೂ. ಎಸ್.ಇ.ಪಿ ಯೋಜನೆಯಡಿ ಕೋಳಿಪಾಳ್ಯ ಗ್ರಾಮಕ್ಕೆ 50 ಲಕ್ಷ ರೂ. ವೆಚ್ಚದಲ್ಲಿ ಸಿಮೆಂಟ್ ಕಾಂಕ್ರಿಟ್ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಲಾಗಿದೆ.
ಈಗಾಗಲೇ ಸರ್ಕಾರದಿಂದ ಬರುವ ಸವಲತ್ತುಗಳನ್ನು ಗಿರಿಜನ ಹಾಡಿಗಳಿಗೆ ವಿತರಿಸಲಾಗಿದೆ. ಆಶ್ರಯ ಮನೆ, ರಸ್ತೆ, ಚರಂಡಿ, ಕುಡಿಯುವ ನೀರು ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಜನತೆಯ ಆಶಯಕ್ಕೆ ಬದ್ಧರಾಗಿ ಗ್ರಾಮಗಳಲ್ಲಿ ರಸ್ತೆ ಚರಂಡಿ, ಸಮುದಾಯ ಭವನ ಆಶ್ರಯಮನೆ ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಸರಕಾರ ಮಂಜೂರುಮಾಡುವ ಅನುದಾನ ಹಾಗೂ ಸೌಲಭ್ಯಗಳನ್ನು ಜನರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಕಾಮಗಾರಿ ನಿರ್ವಹಣೆ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು ಎಂದು ತಿಳಿಸಿದರು.
ಕೃಷಿ ಪತ್ತಿನ ಸಹಕರ ಸಂಘದ ಅಧ್ಯಕ್ಷ ಆರ್.ಮಣಿನಾಯಕ್, ಪುನಜನೂರು ಗ್ರಾಪಂ ಉಪಾಧ್ಯಕ್ಷ ರಾಚಯ್ಯ, ಸದಸ್ಯರಾದ ಪಿ.ನಾಗನಾಯಕ, ಮಹೇಶ್‌ನಾಯಕ್, ಲಲಿತಾಬಾಯಿ, ಸಣ್ಣಕ್ಕಿಗೌಡ ಗ್ರಾಪಂ ಮಾಜಿ ಅಧ್ಯಕ್ಷರಾದ ಶಾಂತಮ್ಮ, ಷಮೀರ್‌ಪಾಷ, ಕಾಮೀಕ ವಿಭಾಗದ ಜಿಲ್ಲಾ ಕಾರ್ಯಾಧ್ಯಕ್ಷ ಪಿ.ಕುಮಾರನಾಯಕ್, ಮುಖಂಡರಾದ ಯ.ನಾಗನಾಯಕ, ರಾಜೇಂದ್ರನಾಯಕ್, ಜಡಯಪ್ಪ ಉಲ್ಲೇಶ್ ನಾಯಕ್, ಬಾಲುನಾಯಕ, ಶಂಕರ್‌ಮೂಡಳ್ಳಿ, ಮಹದೇವನಾಯಕ, ಮಹೇಂದ್ರ, ಬಾಬು, ಸುರೇಶ್, ಮೋಹನ್‌ನಾಯಕ್ ವಿಜಿ, ಮಹೇಂದ್ರನಾಯಕ್, ಗ್ರಾಪಂ ಕಾರ್ಯದರ್ಶಿ ಲಕ್ಷ್ಮಣ್‌ನಾಯಕ್, ಇಂಜಿನಿಯರ್ ಮಧು ಮತ್ತು ಇತರರು ಹಾಜರಿದ್ದರು.