ಕೋಲ್ಡ್ ಸ್ಟೋರೇಜ್‌ನಲ್ಲಿರುವ ಕಾಂಗ್ರೆಸ್ಸನ್ನು ಸೋಲಿಸಿ

Untitled
Published on

ಚಿತ್ರದುರ್ಗ:ಇವರೆಲ್ಲರಿಗೂ ಪ್ರಧಾನಿ ನರೇಂದ್ರ ಮೋದಿ ಟಾರ್ಗೆಟ್ ಆಗಿದ್ದಾರೆ ಎಂದು ಕೇಂದ್ರ ಸಚಿವ ಸ್ಮತಿ ಇರಾನಿ ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದರು.

ಹಿರಿಯೂರು ನೆಹರು ಮೈದಾನದಲ್ಲಿ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್ ಪರ ಪ್ರಚಾರ ಸಭೆ ನಡೆಸಿದ ಅವರು, ಬೃ ಹತ್ ಶಕ್ತಿಯಾಗಿರುವ ಮೋದಿ ಪ್ರತಿಪಕ್ಷದವರ ಟಾರ್ಗೆಟ್ ಆಗುತ್ತಿದ್ದಾರೆ ಎಂದು ಈಚೆಗೆ ಕಾಂಗ್ರೆಸ್ ನಾಯಕರಿಂದ ಮೋದಿ ವಿರುದ್ಧ ಕೇಳಿ ಬಂದ ಟೀಕೆಗೆಗಳಿಗೆ ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ಸಿನವರು ಹಿರಿಯೂರಿಗೆ ಗಾಂಧಿ ಕುಟುಂಬದ ಕುಡಿ ಎಐಸಿಸಿ ಪ್ರಧಾನ ಕಾರ‌್ಯದರ್ಶಿ ಪ್ರಿಯಾಂಗಾಂಧಿ ವಾದ್ರ ಅವರನ್ನು ಕರೆಸಿ ಪೂರ್ಣಿಮಾ ವಿರುದ್ಧ ಪ್ರಚಾರ ಮಾಡಿಸಿದರು. ಪ್ರಿಯಾಂಕ ಗಾಂಧಿ ಕಾಂಗ್ರೆಸ್ಸಿನ ಗ್ಯಾರಂಟಿಗಳ ಬಗ್ಗೆ ಮಾತನಾಡಿದ್ದಾರೆ. ಆದರೆ ಕಾಂಗ್ರೆಸ್ ಸುಳ್ಳು ಭರವಸೆಗಳನ್ನು ನೀಡುತ್ತಾ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ.

ಕಾಂಗ್ರೆಸ್ಸಿಗೆ ಗ್ಯಾರಂಟಿ ಇಲ್ಲ,ದೇಶದಲ್ಲಿ ಅದು ತನ್ನ ಗ್ಯಾರಂಟಿಯನ್ನು ಕಳೆದುಕೊಂಡಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರೈತರ ಪರ ಕೆಲಸ ಮಾಡಲಿಲ್ಲ. ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಗೆ ರೈತರ ಪಟ್ಟಿಯನ್ನೂ ಕೊಟ್ಟಿರಲಿಲ್ಲ.

ಸಿಎಂ ಬಸವರಾಹ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳನ್ನೆ ಕಾಂಗ್ರೆಸ್ ಕಾಪಿ ಪೇಸ್ಟ್ ಮಾಡಿದೆ. ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಕಾರ‌್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಷಣ ಮಾಡಿದ್ದಾರೆ. ಆದರೆ ಅವರ ಮಾತುಗಳಲ್ಲಿ ಗೊಂದಲವಿತ್ತು. ಅವರಲ್ಲೇ ಗೊಂದಲಗಳಿ ರುವಾಗ ಜನರ ಗೊಂದಲಗಳನ್ನು ಹೇಗೆ ಬಗೆಹರಿಸುತ್ತಾರೆ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಭದ್ರಾ ಯೋಜನೆಗೆ 5300 ಕೋಟಿ ರೂ.ನೀಡಿ ದೆ. ನೀರಾವರಿ ಯೋಜನೆಗೆ ನಮ್ಮ ಸರ್ಕಾರ್ ಒತ್ತು ನೀಡಿದೆ. ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಿದೆ ಎಂದ ಅವರು, ಕನ್ಫ್ಯೂಸ್,ಕಾಪಿ ಪೇಸ್ಟ್ ಹಾಗೂ ಕೋಲ್ಡ್ ಸ್ಟೋರೇಜ್‌ನಲ್ಲಿ ಕಾಂಗ್ರೆಸ್ಸನ್ನು ಸೋಲಿಸಿ ಬಿಜೆಪಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net