

ಕಲಬುರಗಿ: ತೋಟಗಾರಿಕೆ ಬೆಳೆ, ಕೃಷಿ ಉತ್ಪನ್ನ ಶೇಖರಿಸಲು ನಬರ‍್ಡ್- ವಿಶ್ವ ಬ್ಯಾಂಕ್ ನೆರವು ಪಡೆದು ಕೋಲ್ಡ್ ಸ್ಟೋರೇಜ್, ವೇರ್ ಹೌಸ್ ನರ‍್ಮಿಸಬೇಕು ಎಂದು ರಾಜ್ಯದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ರ‍್ಖಗೆ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿ, ನಬರ‍್ಡ್ ಮತ್ತು ವಿಶ್ವ ಬ್ಯಾಂಕ್ನಲ್ಲಿ ಅನುದಾನ ಲಭ್ಯವಿದ್ದು, ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ತೋಟಗಾರಿಕೆ ಉಪನರ‍್ದೇಶಕ ಸಂತೋಷ ಇನಾಂದಾರ ಮಾತನಾಡಿ, ಜೇರ‍್ಗಿಯಲ್ಲಿ ಮೆಣಸಿನಕಾಯಿ ಶೇಖರಣೆಗೆ ೭.೫೦ ಕೋಟಿ ರು. ವೆಚ್ಚದಲ್ಲಿ ೫,೦೦೦ ಮೆಟ್ರಿಕ್ ಟನ್ ಸಾರ‍್ಥ್ಯದ ಕೋಲ್ಡ್ ಸ್ಟೋರೇಜ್ಗೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಮಾಹಿತಿ ನೀಡಿದರು.
ಕಲಬುರಗಿ ರೊಟ್ಟಿಗೆ ಬೇಡಿಕೆ ಹೆಚ್ಚುತ್ತಿದ್ದು ಸಂಸ್ಕರಣೆ, ಮಾರುಕಟ್ಟೆ ಒದಗಿಸಿದರೆ ಸಿರಿಧಾನ್ಯದ ರೊಟ್ಟಿ ತಯಾರಿಸುವ ಮಹಿಳೆಯರು ಹೆಚ್ಚು ರ‍್ಥಿಕ ಲಾಭ ಪಡೆಯಬಹುದು. ಭೌಗೋಳಿಕ ಸೂಚ್ಯಂಕ ಹೊಂದಿರುವ, ತೊಗರಿ, ಭೀಮಾ ಪಲ್ಸಸ್, ಕೆಂಬಾಳೆಗೂ ಮಾರುಕಟ್ಟೆ ಕಲ್ಪಿಸಬೇಕು ಎಂದರು.
ಬಸವ, ಪಿಎಂ ಅವಾಸ್ ಯೋಜನೆ ಸೇರಿ ವಿವಿಧ ವಸತಿ ಯೋಜನೆಯಡಿ ೨೦೧೬&-೧೭ ರಿಂದ ೨೦೨೪&-೨೫ರವರೆಗೆ ನೀಡಿದ ಗುರಿಯಂತೆ ಏಕೆ ಮನೆ ಕಟ್ಟಿಲ್ಲ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿ, ಕೂಡಲೇ ಪರ‍್ಣಗೊಳಿಸಿ. ಸೂರಿಲ್ಲದವರಿಗೆ ವಸತಿ ಕಲ್ಪಿಸಬೇಕು ಎಂದು ಜಿಪಂ ಸಿಪಿಒಎಸ್ ಮಠಪತಿಗೆ ನರ‍್ದೇಶಿಸಿದರು.
ಕಲಬುರಗಿ ರಿಂಗ್ ರಸ್ತೆಯ ರ‍್ವಿಸ್ ರಸ್ತೆ ಕಾಮಗಾರಿ ನಿಧಾನಗತಿಯಲ್ಲಿದ್ದು, ವೇಗ ನೀಡಬೇಕು ಎಂದು ಶಾಸಕ ಕನೀಜ್ ಾತಿಮಾ ಹೇಳಿದರು. ಸಚಿವ ರ‍್ಖಗೆ ಮಾತನಾಡಿ, ಅನಗತ್ಯ ವಿಳಂಬ ಸಹಿಸಲ್ಲ. ವಿಳಂಬ ಮಾಡಿದರೆ ಗುತ್ತಿಗೆದಾರರನ್ನು ಕಪು$್ಪ ಪಟ್ಟಿಗೆ ಸೇರಿಸಬೇಕು. ರ‍್ವಿಸ್ ರಸ್ತೆಯಲ್ಲಿ ಅಂಗಟಿ ಮುಂಗಟ್ಟು ಇದ್ದರೆ ತೆರವುಗೊಳಿಸಬೇಕು ಎಂದು ಪಾಲಿಕೆ ಆಯುಕ್ತ ಅವಿನಾಶ ಶಿಂಧೆಗೆ ಸೂಚಿಸಿದರು.
ಕೇಂದ್ರ ರ‍್ಕಾರದ ಹೋದ ಮತ್ತು ತಿರಸತ ಪ್ರಸ್ತಾವನೆ ಹಾಗೂ ಹೊಸದಾಗಿ ಸಲ್ಲಿಸಬೇಕಾದ ಪ್ರಸ್ತಾವನೆ ಕುರಿತು ೧೫ ದಿನದಲ್ಲಿ ವರದಿ ನೀಡಬೇಕು ಎಂದು ನರ‍್ದೇಶಿಸಿದರು.
ವೈದ್ಯಕಿಯ ಶಿಕ್ಷಣ, ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ಕೂಡಾ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಪಂ ಸಿಇಓ ಭಂವರ್ ಸಿಂಗ್ ಮೀನಾ ಇತರರಿದ್ದರು.