ಕೋಲಿ ಸಮಾಜ ಒಗ್ಗೂಡಿಸಿದ ಹೇರೂರ್

Herur
Published on

ಬೀದರ್: ರಾಜ್ಯದಲ್ಲಿ ಹರಿದು ಹಂಚಿಹೋಗಿದ್ದ ಟೋಕರೆ ಕೋಲಿ, ಕಬ್ಬಲಿಗ, ಸಮಾಜವನ್ನು ಒಗ್ಗೂಡಿಸಿ ಮುಖ್ಯ ವಾಹಿನಿಗೆ ತಂದಿರುವ ಕೀರ್ತಿ ದಿ.ವಿಠ್ಠಲ್ ಹೇರೂರ್ ಅವರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಟೋಕರೆ ಕೋಲಿ ಸಮಾಜ ಸಂಘದ ಅಧ್ಯಕ್ಷ ಜಗನ್ನಾಥ ಜಮಾದಾರ ಹೇಳಿದರು.

ನೌಬಾದ್ ಹತ್ತಿರದ ಸಮಾಜ ಸಂಘದ ಕಚೇರಿಯಲ್ಲಿ ಗುರುವಾರ ಜಿಲ್ಲಾ ಟೋಕರೆ ಕೋಲಿ ಸಮಾಜ ಸಂಘ ಹಾಗೂ ಅಂಬಿಗರ ಚೌಡಯ್ಯ ಯುವ ಸೇನೆಯಿಂದ ಏರ್ಪಡಿಸಿದ ಹೇರೂರ್ 7ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ 60 ಲಕ್ಷ ಸಮಾಜ ಬಾಂಧವರಿದ್ದು, 39 ಪರ್ಯಾಯ ಪದಗಳಿಂದ ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಹೆಸರಿನಿಂದ ಕರೆಯುತ್ತಾರೆ. ಸಮಾಜದ ಎಲ್ಲರನ್ನು ಒಗ್ಗೂಡಿಸಿ ಬಲಿಷ್ಠ ಸಮಾಜವನ್ನು ಹೇರೂರ್ ನಿರ್ಮಿಸಿದ್ದಾರೆ. ಈಗ ಅವರು ನಮ್ಮೊಂದಿಗಿಲ್ಲದಿದ್ದರೂ ಅವರ ಆದರ್ಶಗಳು ಸದಾ ಜೀವಂತವಾಗಿವೆ ಎಂದರು.

ಅಂಬಿಗರ ಚೌಡಯ್ಯ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷ ಸುನೀಲ ಭಾವಿಕಟ್ಟಿ, ಉಪಾಧ್ಯಕ್ಷ ಮಾರುತಿ ಮಾರುತಿ ಮಾಸ್ಟರ್, ಮುಖಂಡರಾದ ನಂದಕುಮಾರ ಜಮಗಿಕರ್ ಮಾತನಾಡಿದರು. ಪ್ರಮುಖರಾದ ಶರಣಪ್ಪ ಖಾಶೆಂಪುರ, ಉಮೇಶ ಖಾಶೆಂಪುರ, ರವಿಂದ್ರ ಗುಮಾಸ್ತಿ, ಸೂರ್ಯಕಾಂತ ಸಿರ್ಸಿ, ತುಕಾರಾಮ, ಸುರೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net