ಕೋಲಿ ಸಮಾಜ ಎಸ್‌ಟಿಗೆ ಸೇರಿಸಿ

Ambigara Chowdaiah
Published on

ಕಲಬುರಗಿ: ಬಹುದಿನಗಳ ಬೇಡಿಕೆಯಾಗಿರುವ ಕೋಲಿ ಕಬ್ಬಲಿಗ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡಬೇಕು ಎಂದು ಕೋಲಿ ಕಬ್ಬಲಿಗ ಎಸ್.ಟಿ.ಹೋರಾಟ ಸಮಿತಿ ಅಧ್ಯಕ್ಷ ಲಚ್ಚಪ್ಪ ಜಮಾದಾರ ಆಗ್ರಹಿಸಿದರು. ಕೋಲಿ ಸಮಾಜವನ್ನು ನೆನಪಿನಲ್ಲಿ ಇಡುತ್ತೇನೆ ಎಂದು ಹೇಳಿ ಹೋಗಿದ್ದ ನರೇಂದ್ರ ಮೋದಿ ಸಮಾಜವನ್ನು ಎಸ್‌ಟಿಗೆ ಸೇರಿಸದೆ ಅನ್ಯಾಯ ಮಾಡಿದ್ದಾರೆ. ಈ ಬಗ್ಗೆ ಹಲವು ಬಾರಿ ರಾಜ್ಯ ಸರ್ಕಾರ ಶಿಫಾರಸ್ಸು ಕಳುಹಿಸಿದ್ದು, ಸ್ಪಷ್ಟನೆ ಕೋರಿ ಚುನಾವಣೆ ಹೊಸ್ತಿಲಲ್ಲಿ ವಾಪಸ್ ಕಳುಹಿಸಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಐದು ವರ್ಷದ ಹಿಂದೆ ಕಲಬುರಗಿಗೆ ಭೇಟಿ ನೀಡಿದ್ದು, ಇದೀಗ ಚಕಾರ ಎತ್ತುತ್ತಿಲ್ಲ. ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ನಳೀನಕುಮಾರ ಕಟೀಲ್, ಎನ್.ರವಿಕುಮಾರ, ಸಂಸದ ಉಮೇಶ ಜಾಧವ್ ಭರವಸೆ ನೀಡಿದ್ದು, ಭರವಸೆ ಈಡೇರಿಸಲಿಲ್ಲ. ಇದೀಗ ಪ್ರಧಾನಿಗಳು ಕಲಬುರಗಿಗೆ ಆಗಮಿಸುತ್ತಿದ್ದು, ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು. ರಾಮಲಿಂಗ ನಾಟೀಕಾರ್, ಭೀಮಶಾ ಖನ್ನಾ, ಅಂಬಾರಾಯ ಜವಳಗಾ, ಶಿವರಾಜ ಹಿಂಚಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net