

ಕಲಬುರಗಿ: ಜಿಲ್ಲಾ ಕೋಲಿ(ಕಬ್ಬಲಿಗ) ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಮೇ 26ರಂದು ಬೆಳಗ್ಗೆ 10.30ಕ್ಕೆ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಕೋಲಿ ನೌಕರರ ಜಿಲ್ಲಾ ಸಮಾವೇಶ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ನೀಲಕಂಠ ಜಮಾದಾರ ತಿಳಿಸಿದರು.
ಸಮಾವೇಶದಲ್ಲಿ ಸ್ನೇಹ ಸಂಗಮ ಪರಿಷ್ಕೃತ ಪರಿಚಯ ಗ್ರಂಥ ಲೋಕಾರ್ಪಣೆ ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶ್ರೀ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ರಾಜ್ಯ ಗಂಗಾ ಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಶ್ರೀನಿವಾಸ ಸಮಾವೇಶ ಉದ್ಘಾಟಿಸಲಿದ್ದಾರೆ. ಸ್ನೇಹ ಸಂಗಮ ಪರಿಚಯ ಗ್ರಂಥ ಅಂತಾರಾಷ್ಟ್ರೀಯ ಸಾಮಾಜಿಕ ದರ್ಶನ ಕಾಂಗ್ರೆಸ್ ಹಾಗೂ ಅಂತಾರಾಷ್ಟ್ರೀಯ ಯೋಗ ವಿಜ್ಱಆನ ಕಾಂಗ್ರೆಸ್ ಅಧ್ಯಕ್ಷ ಡಾ.ಬಸವರಾಜ ಸಿದ್ಧಾಶ್ರಮ ಲೋಕಾರ್ಪಣೆ ಮಾಡಲಿದ್ದಾರೆ. ನಾಗಾಬಾಯಿ ಬುಳ್ಳಾ ನೌಕರರ ಗುರುತಿನ ಚೀಟಿ ಬಿಡುಗಡೆ ಮಾಡಲಿದ್ದಾರೆ ಎಂದರು.
ಮಹರ್ಷಿ ವೇದವ್ಯಾಸ ಮತ್ತು ಪ್ರೇರಣಾ ಟ್ರಸ್ಟ್ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಮುಕ್ಕಾ ಮುಖ್ಯ ಅತಿಥಿಯಾಗಿದ್ದು, ಕೋಲಿ (ಕಬ್ಬಲಿಗ) ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನೀಲಕಂಠ ಜಮಾದಾರ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಗಂಗಾ ಮತ ನೌಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಹಾಲೇಶಪ್ಪ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಪ್ರಮುಖರಾದ ನಾಮದೇವ ಕಡಕೋಳ, ಧರ್ಮರಾಜ ಜವಳಿ, ಚಂದ್ರಕಾAತ ತಳವಾರ, ಸಿದ್ದಪ್ಪ ಮಹಾಗಾಂವ, ರಾಜೇಂದ್ರ ಝಳಕಿ, ತುಕಾರಾಂ ಚಿತ್ತಾಪುರ, ಅವ್ವಣ್ಣ ತಳವಾರ ಇತರರಿದ್ದರು.