

ಕಲಬುರಗಿ: ಶ್ರೀ ಮಾತಾ ಮಾಣಿಕೇಶ್ವರಿ ವಧು ವರರ ಕೋಲಿ ಕಬ್ಬಲಿಗ ಮಾಹಿತಿ ಕೇಂದ್ರದಿಮದ ೨೦೨೫ರ ಜನೇವರಿಯಲ್ಲಿ ಕೋಲಿ, ಕಬ್ಬಲಿಗ, ಗಂಗಾಮತದ ವಧುವರರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ಅಧ್ಯಕ್ಷ ಸೂರ್ಯಕಾಂತ ಗುಡ್ಡಡಗಿ ತಿಳಿಸಿದರು. ಕಳೆದ ಒಂಬತ್ತು ವರ್ಷದಿಂದ ವಧು, ವರ ಕೇಂದ್ರ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದು, ಕೋಲಿ, ಕಬ್ಬಲಿಗ, ಗಂಗಾಮತದ ಸಮಾಜದವರು ತಮ್ಮ ಮಕ್ಕಳ ವಿವಾಹಕ್ಕಾಗಿ ಅವರ ವಿವರ, ಭಾವಚಿತ್ರದೊಂದಿಗೆ ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿನ ಕೇಂದ್ರದಲ್ಲಿ ಹೆಸರು ನೋಂದಾಯಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದುವರೆಗೆ ಕೇಂದ್ರದಲ್ಲಿ ೪೦೫ ವರಗಳ ನೋಂದಣಿಯಾಗಿದ್ದು, ೩೦೧ ಮದುವೆಯಾಗಿವೆ. ೫೦೨ ವಧುಗಳ ಮದುವೆ ನೋಂದಣಿಯಾಗಿದ್ದು, ೩೯೬ ಮದುವೆಯಾಗಿವೆ. ಜನವರಿಯಲ್ಲಿ ನಡೆಯುವ ಸಮಾವೇಶಕ್ಕೆ ಬೆಳಗ್ಗೆ ೧೦.೩೦ರಿಂದ ೧.೩೦ರವರೆಗೆ, ಸಂಜೆ ೫.೩೦ರಿಂದ ೭.೩೦ರವರೆಗೆ ಮಾಹಿತಿ ನೋಂದಣಿ ಮಾಡಿಸಬೇಕು. ಮಾಹಿತಿಗೆ ಸೂರ್ಯಕಾಂತ ಗುಡ್ಡಡಗಿ (೯೮೮೦೪೨೭೦೯೯), ಸಾಯಬಣ್ಣ ವಡಗೇರಿ (೯೯೭೨೫೪೬೭೭೮), ಬಾಬು ತಡಕಲ್(೯೯೪೫೪೯೮೩೬೯) ಅವರನ್ನು ಸಂಪರ್ಕಿಸಬೇಕು ಎಂದು ಕೋರಿದರು.
ಭೀಮರಾವ ಐನಾಪುರ, ರಮೇಶ ದಾಸ, ಸಾಯಿಬಣ್ಣ ವಡಗೇರಿ ಇದ್ದರು.