

ಕೋಲಾರ: ಸಚಿವ ಈಶ್ವರಪ್ಪ ಪ್ರಕರಣ, ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿ ಇನ್ನಿತರ ವಿಚಾರವಾಗಿ ರಾಜ್ಯ, ಕೇಂದ್ರ ಸರ್ಕಾರಗಳ ವೈಲ್ಯಗಳ ವಿರುದ್ಧ ಜನರ ಗಮನ ಸೆಳೆಯಲು ಕಾಂಗ್ರೆಸ್ನಿಂದ ಪ್ರವಾಸ ಆರಂಭಿಸಿದ್ದು, ಏ.17ರ ಭಾನುವಾರ ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಕೋಲಾರದ ಗಾಂಧಿವನದಲ್ಲಿ ಪ್ರತಿಭಟನೆ ಮಾಡುವುದಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಡಳಿತ, ಅಭಿವೃದ್ಧಿ, ಸಾಮರಸ್ಯದ ಬಗ್ಗೆ ಮಾತನಾಡಬೇಕಾದವರು ನಾನಾ ವಿಚಾರಗಳ ಮೂಲಕ ರಾಜ್ಯದ ಮಹತ್ವವನ್ನೇ ಹಾಳು ಮಾಡುತ್ತಿದ್ದಾರೆ. ಸಚಿವರು ಹಾದಿ ಬೀದಿಯಲ್ಲಿ ಹೋಗುವ ಪುಂಡು ಪೋಕರಿಗಳ ಹಾಗೆ ಮಾತನಾಡುತ್ತಿದ್ದು, ಕೂಡಲೇ ನಿಲ್ಲಿಸಲಿ ಎಂದರು.
ಕಾಂಗ್ರೆಸ್ ಹೋರಾಟದ ಪರಿಣಾಮವಾಗಿಯೇ ಸಚಿವ ಈಶ್ವರಪ್ಪ ಶೇ.40 ಪರ್ಸೆಂಟೇಜ್ ಪ್ರಕರಣದಲ್ಲಿ ರಾಜೀನಾಮೆ ನೀಡಿದ್ದಾರೆ. ಅಭಿವೃದ್ಧಿ, ಸಾಮರಸ್ಯ, ಸಾಧನೆಗಳ ಬಗ್ಗೆ ಸರ್ಕಾರ ಮಾತನಾಡುತ್ತಿಲ್ಲ. ರಾಜ್ಯವನ್ನು ಏನು ಮಾಡಬೇಕೆಂದುಕೊಂಡಿದ್ದಾರೆಯೋ ತಿಳಿಯುತ್ತಿಲ್ಲವೆಂದು ಕಿಡಿಕಾರಿದ ಅವರು, ಈ ಎಲ್ಲ ವೈಫಲ್ಯಗಳ ವಿರುದ್ಧ ನಮ್ಮ ಹೋರಾಟ ಮುಂದುವರಿಯುವುದು ಎಂದರು.
ಸದಸ್ಯತ್ವ ಅಭಿಮಾನ ಏ.1ಕ್ಕೆ ಮುಕ್ತಾಯವಾಗಬೇಕಿದ್ದರೂ ಸದನವಿದ್ದ ಕಾರಣ ಏ.15ರವರೆಗೆ ನಡೆಸಲಾಗಿದೆ. ನೂತನವಾಗಿ 2 ಲಕ್ಷಕ್ಕೂ ಹೆಚ್ಚು ಸದಸ್ಯತ್ವ ಮಾಡಲಾಗಿದೆ. ಸೀಮಿತ ಅವಧಿಗೆ ನಾನು ಜವಾಬ್ದಾರಿ ವಹಿಸಿಕೊಳ್ಳುವೆ ಎಂದು ಮೊದಲೇ ಹೇಳಿದ್ದೆ. ಅಂತೆಯೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಡಿಕೆಶಿ, ಸಿದ್ದರಾಮಯ್ಯಗೆ ಪತ್ರ ಮುಖೇನ ತಿಳಿಸಿದ್ದೇನೆ ಎಂದರು.
ರಾಜೀನಾಮೆಗೆ ಕಾರಣವಿಲ್ಲ ಎಂದು ನಾನು ಮೊದಲೇ ಹೇಳಿದ್ದೆ, 2-3 ತಿಂಗಳಿಗಷ್ಟೇ ಅಧ್ಯಕ್ಷನಾಗುತ್ತೇನೆ ಎಂದು. ಹೀಗಾಗಿ ನನಗೆ ಬೇಸರವಿಲ್ಲ. ಸಾಕಷ್ಟು ಮಂದಿ ಸಮರ್ಥರಿದ್ದಾರೆ. ವರಿಷ್ಠರು ತೀರ್ಮಾನ ಕೈಗೊಳ್ಳುವರು. ಪಕ್ಷ ಸಂಟನೆಯಲ್ಲಿ ಎಐಸಿಸಿ, ಕೆಪಿಸಿಸಿ, ಡಿಸಿಸಿ ಬಹಳ ಜವಾಬ್ದಾರಿ ಹುದ್ದೆಗಳು. ಆ ಹುದ್ದೆಗೆ ಯಾರಿಂದಲೂ ಅಪಚಾರ ಆಗಬಾರದು ಎಂದು ಸಲಹೆ ನೀಡಿದರು.
ಪರಿಹಾರ ನೀಡಬೇಕಿತ್ತು: ಬಿಜೆಪಿಯವರ ಆಧಾರರಹಿತ ಆರೋಪಗಳಿಗೆ ಉತ್ತರ ಕೊಡಲು ಸಾಧ್ಯವಿಲ್ಲ. ಅವರಿಗೆ ಕಾಳಜಿ ಇದ್ದಿದ್ದರೆ ಸಂತೋಷ್ಗೆ ಬಿಲ್ ಪಾವತಿಸಬೇಕಿತ್ತು, ಕುಟುಂಬಕ್ಕೆ ಪರಿಹಾರ ನೀಡುವ ಜತೆಗೆ ಅವರ ಪತ್ನಿಗೆ ಉದ್ಯೋಗ ಕೊಡಬೇಕಿತ್ತು ಎಂದು ಸುದರ್ಶನ್ ಹೇಳಿದರು.
ಶ್ರೀರಾಮರೆಡ್ಡಿ ಜನನಾಯಕ: ಹೃದಯಾಘಾತದಿಂದ ನಿಧನರಾದ ಬಾಗೇಪಲ್ಲಿ ೇತ್ರದ ಮಾಜಿ ಶಾಸಕ ಶ್ರೀರಾಮರೆಡ್ಡಿ ಸಂವಿಧಾನದ ವಿಷಯಗಳಲ್ಲಿ ಅಗಾಧ ನಂಬಿಕೆ ಇಟ್ಟವರು. ನಿರಂತರವಾಗಿ ಹೋರಾಟಗಳನ್ನು ಮಾಡಿಕೊಂಡು ಬಂದ ಜನನಾಯಕ ಎಂದು ವಿ.ಆರ್.ಸುದರ್ಶನ್ ತಿಳಿಸಿದರು. 2 ಬಾರಿ ಶಾಸಕರಾಗಿ ಅತ್ಯಂತ ಜವಾಬ್ದಾರಿಯುತವಾಗಿ ಸದನದ ಹೊರಗೆ, ಒಳಗೆ ಬಡವರ ಪರ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದರು. ಶ್ರೀರಾಮರೆಡ್ಡಿ, ಕೆ.ಎಸ್.ಪುಟ್ಟಣ್ಣಯ್ಯ, ವಾಟಾಳ್, ಕೆಜಿಎಫ್ನ ರಾಜೇಂದ್ರ, ಇಂದಿನ ಮಾಧುಸ್ವಾಮಿ ಸಂಸದೀಯ ಪಟುಗಳಾಗಿ ಕೆಲಸ ಮಾಡಿದ್ದನ್ನು ಹತ್ತಿರದಿಂದ ನೋಡಿದ್ದೇನೆ. 2002&03ರಲ್ಲಿ ಶ್ರೀರಾಮರೆಡ್ಡಿ ನೇತೃತ್ವದಲ್ಲಿ ಶಾಶ್ವತ ನೀರಾವರಿ ಬಗ್ಗೆ ಬೃಹತ್ ಹೋರಾಟ ನಡೆದಿತ್ತು. ಅವಿಭಜಿತ ಕೋಲಾರ ಭಾಗದಲ್ಲಿ ಮೊದಲು ದನಿ ಎತ್ತಿದ್ದರು. ಅವರ ಹೋರಾಟದ ಮನೋಭಾವನೆ ಎಲ್ಲ ಪಕ್ಷಗಳ ಪ್ರತಿನಿಧಿಗಳಿಗೂ ಅಗತ್ಯವಿದೆ ಎಂದರು.
ಕಾಂಗ್ರೆಸ್ ಎಸ್ಸಿ ಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್ ಉಪಸ್ಥಿತರಿದ್ದರು.