

ಕೋಲಾರ: ಪಾದಚಾರಿಗಳ ಅನುಕೂಲಕ್ಕಾಗಿ ಲಕ್ಷಾಂತರ ರೂ. ಖರ್ಚು ವಾಡಿ ನಗರದಲ್ಲಿ ನಿರ್ಮಿಸಿರುವ ಫುಟ್‌ಪಾತ್‌ಗಳನ್ನು ವ್ಯಾಪಾರಿಗಳು ಒತ್ತುವರಿ ವಾಡಿಕೊಂಡಿದ್ದು ಇದರಿಂದ ಜಿಲ್ಲಾ ಕೇಂದ್ರ ಕೋಲಾರ ಅಭಿವದ್ಧಿ ಮತ್ತು ಸುಂದರೀಕರಣಕ್ಕೆ ಅಡ್ಡಿಯಾಗಿರುವುದರಿಂದ ತೆರವುಗೊಳಿಸುವಂತೆ ಸವಾನ ಮನಸ್ಕರ ವೇದಿಕೆಯಿಂದ ಸೋಮವಾರ ಜಿಲ್ಲಾಧಿಕಾರಿಗೆೆ ಮನವಿ ಸಲ್ಲಿಸಲಾಯಿತು.
ವೇದಿಕೆ ಮುಖಂಡ ಹಾಗೂ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ ವಾತನಾಡಿ, ಬಡವರಿಗೆ ತೊಂದರೆ ನೀಡುವುದು ವೇದಿಕೆ ಉದ್ದೇಶವಲ್ಲ, ಪಾದಚಾರಿಗಳು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವುದರಿಂದ ಫುಟ್‌ಪಾತ್ ಒತ್ತುವರಿ ತೆರವು ಆಗಲೇಬೇಕು ಎಂದು ಒತ್ತಾಯಿಸಿದರು.
ತಳ್ಳುವ ಗಾಡಿಯಲ್ಲಿ ಹಣ್ಣು, ತರಕಾರಿ, ಹೂವು ವಾರುವವರು ವ್ಯಾಪಾರದ ಬಳಿಕ ಗಾಡಿಯನ್ನು ಮನೆ ಬಳಿ ನಿಲ್ಲಿಸಬಹುದು. ಆದರೆ ಅನೇಕರು ಫುಟ್‌ಪಾತ್‌ಗಳಲ್ಲಿ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದರು. ನಗರಸಭೆ, ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಡ ವ್ಯಾಪಾರಿಗಳಿಗೆ ಸೂಕ್ತ ಜಾಗದಲ್ಲಿ ವ್ಯಾಪಾರ ವಾಡಲು ಜಾಗ ಗುರುತಿಸುವಂತೆ ಮನ್ವಂತರ ಪ್ರಕಾಶನದ ಹಿರಿಯ ಸಂಟನಾ ಕಾರ್ಯದರ್ಶಿ ಎಸ್.ಮಂಜುನಾಥ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂದ ಅಧ್ಯಕ್ಷ ವಿ.ಮುನಿರಾಜು ತಿಳಿಸಿದರೆ, ಹಳೇ ಬಸ್ ನಿಲ್ದಾಣದಲ್ಲಿ ತಳ್ಳುವ ಗಾಡಿ ನಿಲ್ಲಿಸಿಕೊಂಡು ವ್ಯಾಪಾರ ವಾಡಲು ಅವಕಾಶ ಕಲ್ಪಿಸುವಂತೆ ಹಾಗೂ ಹೊಸ ಬಸ್ ನಿಲ್ದಾಣ ಹಿಂಭಾಗ ಇರುವ ಸ.ನಂ. 81ರ ನಿವೇಶನ ಹಾಗೂ ಎಂ.ಬಿ.ರಸ್ತೆಗೆ ಹೊಂದಿಕೊಂಡಿರುವ ಸಂತೆ ಮೈದಾನದಲ್ಲಿ ಬೆಳಗ್ಗೆ 6ರಿಂದ 11ರವರೆಗೆ ತರಕಾರಿ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮೇಡಿಹಾಳ ರಾವೇಂದ್ರ, ಜಯಕರ್ನಾಟಕ ಸಂಟನೆ ಜಿಲ್ಲಾಧ್ಯಕ್ಷ ತ್ಯಾಗರಾಜ್ ಕೋರಿದರು.
ಹಿರಿಯ ಮುಖಂಡ ಹೊಳಲಿ ಪ್ರಕಾಶ್, ರೈತ ಸಂದ ಮುಖಂಡರಾದ ರಾಮು ಶಿವಣ್ಣ, ಬಿಜೆಪಿ ನಾವಾಲ ಮಂಜು, ನೀರಾವರಿ ಹೋರಾಟ ಸಮಿತಿಯ ಚಿನ್ನಿ ಶ್ರೀನಿವಾಸ್, ಸುಧೀರ್, ಕನ್ನಡ ಪಕ್ಷದ ಹಿರಿಯ ಮುಖಂಡ ಅ.ಕ.ಸೋಮಶೇಖರ್, ರೆಡ್ ಕ್ರಾಸ್ ಸಂಸ್ಥೆಯ ವೆಂಕಟಕೃಷ್ಣ, ಕುರುಬ ಸವಾಜದ ಮುಖಂಡ ಮುನಿರಾಜು ಇತರರಿದ್ದರು.
ಫುಟ್‌ಪಾತ್ ತೆರವು ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕಾರ್ಯಾಚರಣೆ ವರದಿ ಪಡೆದು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ರಸ್ತೆ ಅಭಿವದ್ಧಿಗೆ ಗುತ್ತಿಗೆದಾರರ ವಿಳಂಬ ನೀತಿಯಿಂದ ತೊಂದರೆಯಾಗುತ್ತಿದೆ. ಕಸ ವಿಲೇವಾರಿಗೆ ನಗರಸಭೆಗೆ ಕೆಂದಟ್ಟಿ ಬಳಿ 10 ಎಕರೆ ಭೂಮಿ ನೀಡಲಾಗಿದೆ, ವೈಜ್ಞಾನಿಕವಾಗಿ ಕಸ ವಿಲೇವಾರಿ ವಾಡಿದಲ್ಲಿ ಸ್ವಚ್ಛತೆಗೆ ಭಂಗ ಉಂಟಾಗದು. ಡಾ.ಆರ್.ಸೆಲ್ವಮಣಿ, ಜಿಲ್ಲಾಧಿಕಾರಿ, ಕೋಲಾರ