

ಕೋಲಾರ: ನಗರದ ಸರ್ಕಾರಿ ಬಸ್ ನಿಲ್ದಾಣ ಹಾಗೂ ಜಿಲ್ಲೆಯ ವಿವಿಧ ಡಿಪೋ ವ್ಯಾಪ್ತಿಯಲ್ಲಿ ಸೋಮವಾರ 268 ಬಸ್‌ಗಳು ವಿವಿಧ ಊರುಗಳಿಗೆ ಸಂಚಾರ ಆರಂಭಿಸಿವೆ. ಸರ್ಕಾರದ ಕರೊನಾ ನಿಯಮಾನುಸಾರ ಶೇ.50 ಪ್ರಯಾಣಿಕರಿಗೆ ಅವಕಾಶ ನೀಡಿದೆಯಾದರೂ ಮೊದಲ ದಿನ ಶೇ.40ರಷ್ಟು ಪ್ರಯಾಣಿಕರು ಮಾತ್ರ ಬಸ್‌ನಲ್ಲಿ ಸಂಚರಿಸಿದ್ದಾರೆ. ಪ್ರಯಾಣಿಕರಿಗೆ ಕಡ್ಡಾಯವಾಗಿ ಮಾಸ್ಕ್, ಅಂತರ ಕಾಯ್ದುಕೊಳ್ಳಲು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಧ್ವನಿವರ್ಧಕ ಮೂಲಕ ಸೂಚನೆ ನೀಡಿದರು.
ಕೋಲಾರದಿಂದ ತಾಲೂಕಿನ ವಿವಿಧ ಮಾರ್ಗಗಳಲ್ಲಿ ಬಸ್ ಸಂಚಾರ ಆರಂಭಿಸಿದರೂ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿತ್ತು. ಮಂಗಳವಾರದಿಂದ ಇನ್ನಷ್ಟು ಸುಧಾರಣೆ ಆಗಲಿದೆ. ನಮ್ಮ ಸಂಸ್ಥೆ ಪ್ರಯಾಣಿಕರ ರಕ್ಷಣೆಗಾಗಿ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡಿದೆ ಎಂದು ಕೆಎಸ್‌ಆರ್‌ಟಿಸಿಯ ಕೋಲಾರ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ.
ಬೇಕಾಬಿಟ್ಟಿ ಓಡಾಟ: ಸರ್ಕಾರ ಲಾಕ್‌ಡೌನ್ ಸಡಿಲಗೊಳಿಸಿದ್ದರಿಂದ ಜನರ ಕರೊನಾ ಭಯವಿಲ್ಲದೆ ಬೇಕಾಬಿಟ್ಟಿಯಾಗಿ ಓಡಾಡಲಾರಂಭಿಸಿದ್ದಾರೆ. ಸೋಮವಾರ ನಗರದಲ್ಲಿ ಅನೇಕರು ಮಾಸ್ಕ್ ಇಲ್ಲದೆ ಓಡಾಡುತ್ತಿದ್ದದ್ದು ಕಂಡು ಬಂದಿತು. ಬೀಡಿ-ಸಿಗರೇಟ್‌ಗಾಗಿ ಟೀ ಸ್ಟಾಲ್, ಚಿಲ್ಲರೆ ಅಂಗಡಿಗಳ ಮುಂದೆ ಜನ ಮುಗಿ ಬಿದ್ದಿದ್ದರು.