ಕೋರ್ಟ್‌ಗೆ ಸಕಲ ಸೌಲಭ್ಯ ಕಲ್ಪಿಸಲು ಆದ್ಯತೆ

24-99
ಬೈಲಹೊಂಗಲದಲ್ಲಿ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಮುಸ್ತಾ ಹುಸೇನ್ ಎಸ್.ಎ. ಅವರನ್ನು ಸನ್ಮಾನಿಸಲಾಯಿತು. ನ್ಯಾಯಾಧೀಶರಾದ ಉಷಾರಾಣಿ ಆರ್., ಮನು ಶರ್ಮಾ, ಸುನೀಲಕುಮಾರ, ಸಂಘದ ಅಧ್ಯಕ್ಷ ಎಸ್.ಬಿ. ಆನಿಗೋಳ ಇದ್ದರು.
Published on

ಬೈಲಹೊಂಗಲ, ಬೆಳಗಾವಿ: ಪಟ್ಟಣದ ನ್ಯಾಯಾಲಯದಲ್ಲಿ ವಕೀಲರ ಚೇಂಬರ್, ಕ್ಯಾಂಟೀನ್, ಪಕ್ಷಗಾರರಿಗೆ ಕಾಯುವ ಸ್ಥಳ, ಡಿಜಿಟಲ್ ಗ್ರಂಥಾಲಯ ಕಾಮಗಾರಿಗಳಿಗೆ ಉಚ್ಚ ನ್ಯಾಯಾಲಯದ ಅನುಮೋದನೆಯಾಗಿದ್ದು, ಸರ್ಕಾರದಿಂದ ಅನುದಾನ ಬಿಡುಗಡೆಯಾದ ನಂತರ ಕಾಮಗಾರಿಗಳು ಪ್ರಾರಂಭವಾಗಲಿವೆ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಮುಸ್ತಾ ಹುಸೇನ್ ಎಸ್.ಎ. ಹೇಳಿದರು.

ಪಟ್ಟಣದ ನ್ಯಾಯವಾದಿಗಳ ಸಭಾಂಗಣದಲ್ಲಿ ಈಚೆಗೆ ಪ್ರಥಮ ಬಾರಿಗೆ ನ್ಯಾಯಾಲಯಕ್ಕೆ ಭೇಟಿ ನೀಡಿ, ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ನ್ಯಾಯಾಲಯಕ್ಕೆ ಬೇಕಾದ ಎಲ್ಲ ಸೌಲಭ್ಯ ಒದಗಿಸುವ ಭರವಸೆ ನೀಡಿದರು.

ಹಿರಿಯ ನ್ಯಾಯವಾದಿ ಜೆ.ಕೆ. ರೀಜಾ ಮಾತನಾಡಿ, ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣನ ನಾಡಿನ ಮಣ್ಣಿನಲ್ಲಿ ಅಗಾಧ ಶಕ್ತಿ ಇದೆ. ಇಲ್ಲಿನ ಜನರು ಅನ್ಯಾಯ ಸಹಿಸುವುದಿಲ್ಲ. ನ್ಯಾಯವಾದಿಗಳು ವಿನಾಕಾರಣ ಸಮಯ ವಿಳಂಬ ಮಾಡದೇ ಕಕ್ಷಿದಾರರಿಗೆ ಶೀಘ್ರ ನ್ಯಾಯ ದೊರಕಿಸಲು ಪ್ರಯತ್ನಿಸಬೇಕು ಎಂದರು.

ದಿವಾಣಿ ಹಿರಿಯ ಶ್ರೇಣಿ ನ್ಯಾಯಾಧೀಶೆ ಉಷಾರಾಣಿ ಆರ್., ಪ್ರಧಾನಿ ದಿವಾಣಿ ನ್ಯಾಯಾಧೀಶ ಮನು ಶರ್ಮಾ, ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಸುನೀಲಕುಮಾರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಬಿ. ಆನಿಗೋಳ, ಉಪಾಧ್ಯಕ್ಷ ಎಂ.ಆರ್. ಸೋಮನ್ನವರ, ಅಪರ ಸರ್ಕಾರಿ ವಕೀಲ ರಮೇಶ ಕೋಲಕಾರ, ಬಿ.ಆರ್. ಅಲಸಂದಿ, ಅಶೋಕ ಮೂಗಿ, ಝಡ್.ಎ. ಗೋಕಾಕ, ಎಸ್.ಜಿ. ಬೂದಯ್ಯನವರಮಠ, ಸಿ.ಎಸ್. ಚಿಕ್ಕನಗೌಡರ, ಆರ್.ಎಸ್. ಮಮದಾಪುರ, ಡಿ.ಆರ್. ಜೋಶಿ, ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಜೆ. ಬಾಂವಿ, ಸಹ ಕಾರ್ಯದರ್ಶಿ ಎಂ.ಎಂ. ಅಲ್ಲಯ್ಯನವರಮಠ, ಸದಸ್ಯರಾದ ಜೆ.ಜಿ. ಬೂದಿಹಾಳ, ವಿ.ಸಿ. ಪೂಜೇರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net