ಕೋರ್ಟ್​ನಲ್ಲಿ ಒಂದಾದ ದಂಪತಿ

15ard01
ಔರಾದ್ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಒಂದಾದ ದಂಪತಿ. ನ್ಯಾಯಾಧೀಶ ಅಭಿನಯ, ವಕೀಲ ಬಾಲಾಜಿ ಕಂಬಾರ, ಝರೆಪ್ಪ ಕೋಟೆ ಇತರರಿದ್ದರು.
Published on

ಔರಾದ್: ಇಲ್ಲಿನ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಮೂರು ವರ್ಷಗಳಿಂದ ದೂರವಾಗಿದ್ದ ದಂಪತಿ ರಾಜಿ ಸಂಧಾನದ ಮೂಲಕ ಮತ್ತೆ ಒಂದಾಗಿದ್ದಾರೆ.

ಮಹಾರಾಷ್ಟ್ರದ ಮುಖೇಡ ತಾಲೂಕಿನ ಭೆಂಡೆಗಾಂವ ಗ್ರಾಮದ ಶಿಲ್ಪಕರ ಅವರು ಖೇರ್ಡಾ(ಬಿ)ದ ದೈವಶಾಲ ಜತೆ ಮದುವೆ ಆಗಿದ್ದರು. ಮೂರು ವರ್ಷದ ಗಂಡು ಮಗು ಇದ್ದರೂ ಕಾರಣಾಂತರಗಳಿಂದ ದೂರವಾಗಿದ್ದರು.

ದೈವಶಾಲ ತಾಲೂಕು ನ್ಯಾಯಾಲಯಕ್ಕೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಮೂರು ವರ್ಷ ವಿಚಾರಣೆ ನಂತರ ಶನಿವಾರದ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶ ಅಭಿನಯ ಅವರು ನೆಮ್ಮದಿಯಿಂದ ದಾಂಪತ್ಯ ಜೀವನ ನಡೆಸುವಂತೆ ದಂಪತಿ ಮನವೊಲಿಸಿ ಒಂದುಗೂಡಿಸಿದರು. ವಕೀಲ ಬಾಲಾಜಿ ಕಂಬಾರ, ಝರೆಪ್ಪ ಕೋಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net