ಕೋರೆಗೆ ‘ಸಕ್ಕರೆ ಉದ್ಯೋಗ ಗೌರವ ಪುರಸ್ಕಾರ’

18 Jaggu 5
ಕೇಂದ್ರದ ಮಾಜಿ ಸಚಿವ ಶರದ್ ಪವಾರ ಅವರು ಡಾ.ಪ್ರಭಾಕರ ಕೋರೆ ಅವರಿಗೆ ‘ಸಕ್ಕರೆ ಉದ್ಯೋಗ ಗೌರವ ಪುರಸ್ಕಾರ’ ಪ್ರದಾನ ಮಾಡಿದರು. ಕಲ್ಲಪ್ಪಣ್ಣ ಅವಾಡೆ, ನರೇಂದ್ರ ಮೋಹನ ಇತರರು ಇದ್ದರು.
Published on

ಬೆಳಗಾವಿ: ದಿ. ಡೆಕ್ಕನ್ ಶುಗರ್ ಟೆಕ್ನಾಲಜಿಸ್ಟ್ ಅಸೋಸಿಯೇಷನ್ ಇಂಡಿಯಾ ತನ್ನ 67ನೇ ವಾರ್ಷಿಕ ಕನ್ವೇಷನ್ ಮತ್ತು ಶುಗರ್ ಎಕ್ಸಪೋ-2022ರ ಪುಣೆ ಸಮಾರಂಭದಲ್ಲಿ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರಿಗೆ ಭಾನುವಾರ ‘ಸಕ್ಕರೆ ಉದ್ಯೋಗ ಗೌರವ ಪುರಸ್ಕಾರ’ ಪ್ರದಾನ ಮಾಡಲಾಯಿತು. ಕೇಂದ್ರದ ಮಾಜಿ ಸಚಿವ ಶರದ್ ಪವಾರ ಪ್ರಶಸ್ತಿ ಪ್ರದಾನ ಮಾಡಿದರು.

ಮಾಜಿ ಸಂಸದ ಕಲ್ಲಪ್ಪಣ್ಣ ಅವಾಡೆ, ರಾಷ್ಟ್ರೀಯ ಸಕ್ಕರೆ ಇನ್‌ಸ್ಟಿಟ್ಯೂಟ್ ನಿರ್ದೇಶಕ ನರೇಂದ್ರ ಮೋಹನ, ಮಹಾರಾಷ್ಟ್ರದ ಸಕ್ಕರೆ ಆಯುಕ್ತ ಶೇಖರ ಗಾಯ್ಕವಾಡ, ಡೆಕ್ಕನ್ ಶುಗರ್ ಟೆಕ್ನಾಲಜಿಸ್ಟ್ ಅಸೋಸಿಯೇಷನ್ ಇಂಡಿಯಾ ಅಧ್ಯಕ್ಷ ಎಸ್.ಎಸ್.ಗಂಗಾವತಿ ಇತರರು ಇದ್ದರು.

ಕೋರೆ ಅವರು ಬಸಪ್ರಭು ಸಹಕಾರ ಸಕ್ಕರೆ ಕಾರ್ಖಾನೆ ಮಾರ್ಗದರ್ಶಕರಾಗಿ, ರೈತರಿಗೆ ಕಡಿಮೆ ದರದಲ್ಲಿ ಬೀಜಗೊಬ್ಬರ ಪೂರೈಕೆ, ಕಬ್ಬು ಬೆಳೆಗಾರರಿಗೆ ವಿಶೇಷ ತಂತ್ರಜ್ಞಾನ-ತಾಂತ್ರಿಕತೆ ಅಳವಡಿಕೆಗೆ ಬೇಕಾದ ಎಲ್ಲ ರೀತಿಯ ಪ್ರೋತ್ಸಾಹ, ಬೆಳಗಾವಿಯಲ್ಲಿ ಸ್ಥಾಪನೆಯಾಗಿರುವ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ತರುವಲ್ಲಿ ಡಾ.ಪ್ರಭಾಕರ ಕೋರೆ ಅವರು ಪ್ರಮುಖ ಪಾತ್ರ ವಹಿಸಿದ್ದರು. ರಾಷ್ಟ್ರೀಯ ಸಕ್ಕರೆ ಸಂಸ್ಥೆಯ ಮಹಾಮಂಡಳದ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಹಿಂದುಳಿದ ತಾಲೂಕುಗಳಲ್ಲಿ ಒಂದಾಗಿರುವ ರಾಯಬಾಗ ತಾಲೂಕಿನಲ್ಲಿ ಅತ್ಯಾಧುನಿಕ ಶಿವಶಕ್ತಿ ಸಕ್ಕರೆ ಕಾರ್ಖಾನೆಯ ಸಂಸ್ಥಾಪಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸಕ್ಕರೆ ಉದ್ಯಮದಲ್ಲಿ ಸಲ್ಲಿಸಿರುವ ಗಮನಾರ್ಹ ಸಾಧನೆ ಪರಿಗಣಿಸಿ ಪುರಸ್ಕಾರ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net