ಕೋರೆ ಜನ್ಮದಿನೋತ್ಸವದಲ್ಲಿ ಪಾಲ್ಗೊಳ್ಳಿ

12-7
ಯಕ್ಸಂಬಾ ಪಟ್ಟಣದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಡಾ. ಪ್ರಭಾಕರ ಕೋರೆ ಜನ್ಮದಿನದ ಪೂರ್ವಭಾವಿ ಸಭೆಯಲ್ಲಿ ವಿಪ ಸದಸ್ಯ ಪ್ರಕಾಶ ಹುಕ್ಕೇರಿ ಮಾತನಾಡಿದರು. ಅನಿಲ ಪಾಟೀಲ, ಪಾಂಡುರಂಗ ಮಾನೆ, ಶಿವಾನಂದ ಕರೋಶಿ, ಸುರೇಶ ನಸಲಾಪೂರೆ ಇದ್ದರು.
Published on

ಚಿಕ್ಕೋಡಿ, ಬೆಳಗಾವಿ: ಬೆಳಗಾವಿಯಲ್ಲಿ ಅ.15ರಂದು ಜರುಗಲಿರುವ ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಜನ್ಮದಿನದ ಕಾರ್ಯಕ್ರಮದಲ್ಲಿ ಮತಕ್ಷೇತ್ರದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಕರೆ ನೀಡಿದರು.

ಯಕ್ಸಂಬಾ ಪಟ್ಟಣದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ. ಪ್ರಭಾಕರ ಕೋರೆ ಅಮೃತ ಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೋರೆ ಅವರು ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಸಾಮಾಜಿಕ, ಆರೋಗ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅವರು ಮಾಡಿದ ಸಮಾಜ ಸೇವೆಗೆ ಮನ್ನಣೆ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಪಕ್ಷಾತೀತವಾಗಿ ನಡೆಯುವ ಕಾರ್ಯಕ್ರಮಕ್ಕೆ ಚಿಕ್ಕೋಡಿ ಸದಲಗಾ ಮತಕ್ಷೇತ್ರದ ಅಭಿಮಾನಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.

ಅನಿಲ ಪಾಟೀಲ, ಪಾಂಡುರಂಗ ಮಾನೆ, ಶಿವಾನಂದ ಕರೋಶಿ, ಸುರೇಶ ನಸಲಾಪೂರೆ, ವಾಸುದೇವ ಗಾವಡೆ, ವಿಕಾಶ ಕುರಣೆ, ಶಿವಕುಮಾರ ಕಮತೆ, ಅಜಿತ ಯಳ್ಳೂರೆ, ಮಲ್ಲು ಹವಾಲ್ದಾರ, ಪೋಪಟ ಕಿಲ್ಲೇದಾರ, ವರ್ಧಮಾನ ಸದಲಗೆ, ಶ್ಯಾಮ ರೆವಡೆ ಇದ್ದರು.

ಯಕ್ಸಂಬಾ ಪಟ್ಟಣದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಡಾ. ಪ್ರಭಾಕರ ಕೋರೆ ಜನ್ಮದಿನದ ಪೂರ್ವಭಾವಿ ಸಭೆಯಲ್ಲಿ ವಿಪ ಸದಸ್ಯ ಪ್ರಕಾಶ ಹುಕ್ಕೇರಿ ಮಾತನಾಡಿದರು. ಅನಿಲ ಪಾಟೀಲ, ಪಾಂಡುರಂಗ ಮಾನೆ, ಶಿವಾನಂದ ಕರೋಶಿ, ಸುರೇಶ ನಸಲಾಪೂರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net