ಕೋರಿಮಠದಲ್ಲಿ ಪುರಾಣ ನಾಳೆಯಿಂದ

Ravigond
Published on

ಕಲಬುರಗಿ: ನಗರದ ಬ್ರಹ್ಮಪುರದಲ್ಲಿನ ದನಗರಲ್ಲಿಯ ಕೋರಿಮಠದಲ್ಲಿ ರೇವಣಸಿದ್ಧೇಶರ ಕೋರಿಮಠ ತರುಣ ಸಂಘ ಹಾಗೂ ವಿದ್ಯಾವರ್ಧಕ ಸಂಘದಿAದ ಆ.೪ರಿಂದ ಸೆ.೨ರವರೆಗೆ ನಿತ್ಯ ಸಂಜೆ ೬ರಿಂದ ರಾತ್ರಿ ೧೦ರವರೆಗೆ ರೇವಣಸಿದ್ಧೇಶ್ವರ ದೇವರ ಮಹಾಪುರಾಣ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ರವಿಗೊಂಡ ಕಟ್ಟಿಮನಿ ತಿಳಿಸಿದರು.

ಕಾಗಿನೆಲೆ ತಿಂಥಣಿ ಬ್ರಿಜ್ ಕನಕ ಗುರುಪೀಠದ ಶ್ರೀ ಸಿದ್ಧರಾಮಾನಂದಪುರಿ ಸ್ವಾಮೀಜಿ, ಶ್ರೀ ಲಿಂಗ ಭೀರದೇವರು ಸಾನ್ನಿಧ್ಯದಲ್ಲಿ ಮಹಾಪುರಾಣ ನಡೆಯಲಿದೆ. ಪುರಾಣಿಕ ಕನ್ಹಯ್ಯ ಮಹಾರಾಜರು ಮಹಾಪುರಾಣ ಹೇಳಲಿದ್ದಾರೆ ಎಂದರು.

ಪ್ರಸಕ್ತ ವರ್ಷದಿಂದ ಶಾಶ್ವತ ಅಭಿಷೇಕ ಆರಂಭಿಸಲಾಗುತ್ತಿದೆ. ಪುರಾಣಕ್ಕೆ ಜನಪ್ರತಿನಿಧಿಗಳು, ಸಮಾಜದ ಗಣ್ಯರು, ಪೂಜ್ಯರು, ಸಂತರು, ಅಧಿಕಾರಿಗಳನ್ನು ಆಹ್ವಾನಿಸಲಾಗುತ್ತಿದೆ. ಪುರಾಣವನ್ನು ೫೦೦ಕ್ಕೂ ಅಧಿಕ ಭಕ್ತರು ಆಲಿಸಲಿದ್ದಾರೆ. ದನಗರಗಲ್ಲಿ, ಸಮತಾ ಕಾಲನಿ, ಕನಕ ನಗರ ಸೇರಿ ಸುತ್ತಲಿನ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದರು.

ಆ.೪ ರಂದು ಸಂಜೆ ೪ರಿಂದ ಶರಣಬಸವೇಶ್ವರ ದೇವಸ್ಥಾನದಿಂದ ಕೋರಿ ಮಠದವರೆಗೆ ಜಗದ್ಗುರು ಶ್ರೀ ಸಿದ್ಧರಾಮಾನಂದಪುರಿ ಅವರ ಮೆರವಣಿಗೆ ನಡೆಯಲಿದೆ. ಡೊಳ್ಳು ಕುಣಿತ, ಹೆಣ್ಣು ಮಕ್ಕಳ ಕುಂಭ ಮೇಳದೊಂದಿಗೆ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.
ರಾಜು ಆಲಗೂಡ, ರಜನಿಕಾಂತ ಮೇಳಕುಂದಿ, ಶಿವಯೋಗಿ ಬನಸೋಡ, ಧರ್ಮರಾಜ ಚೌಕಿ, ಶರಣಬಸಪ್ಪ ಗರೂರ, ಸುನೀಲ ತೆಗನೂರ, ಮಂಜುನಾಥ ತೆಗನೂರ, ರಮೇಶ ಕಟ್ಟಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net