ಕೋರವಾರದಲ್ಲಿ ನೀರಿನ ಸಮಸ್ಯೆ ನಿವಾರಿಸಿ

Korawara, water problem, Devahipparagi,
ಕೋರವಾರ ಗ್ರಾಮದ 4-5ನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವಂತೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಜಿ.ವಿ.ಪಟ್ಟಣಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು. ಅನಸುಬಾಯಿ ಬಿರಾದಾರ, ಚನ್ನಪ್ಪಗೌಡ ಬಿರಾದಾರ, ಯಲ್ಲಮ್ಮ ಬಾಗೇವಾಡಿ, ಸಾಬವ್ವ ಯಾಳವಾರ, ಸಾವಿತ್ರಿ ಯರಗಲ್ ಇತರರಿದ್ದರು.
Published on

ದೇವರಹಿಪ್ಪರಗಿ: ತಾಲೂಕಿನ ಕೋರವಾರ ಗ್ರಾಮದಲ್ಲಿ ಮಹಿಳೆಯರು ಖಾಲಿ ಕೊಡಗಳೊಂದಿಗೆ ಗ್ರಾಮ ಪಂಚಾಯಿತಿಗೆ ಆಗಮಿಸಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಬೇಕು ಎಂದು ಆಗ್ರಹಿಸಿದರು.

ಅನಸುಬಾಯಿ ಬಿರಾದಾರ ಮಾತನಾಡಿ, ನಮ್ಮ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ನೀರು ಸಮಯಕ್ಕೆ ಸರಿಯಾಗಿ ಪೂರೈಸಲು ಹಲವು ಬಾರಿ ಮನವಿ ಮಾಡಿದರೂ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಪಂದಿಸುತ್ತಿಲ್ಲ. ಹೀಗಾದರೆ ನೀರಿಗಾಗಿ ಮಹಿಳೆಯರು ಯಾರನ್ನು ಕೇಳಬೇಕು ? ಗ್ರಾಮದಲ್ಲಿ 25 ಕೊಳವೆಬಾವಿ ಹಾಗೂ 3 ಬಾವಿಗಳಿದ್ದರೂ ಅವುಗಳಲ್ಲಿ ನೀರಿನ ಕೊರತೆ ಕಂಡು ಬಂದಿದೆ.

ಗ್ರಾಮ ಪಂಚಾಯಿತಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ ನೀರು ಪೂರೈಸಲು ಮುಂದಾಗಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಮುಂದೆ ಉಗ್ರ ಹೋರಾಟ ಮಾಡಬೇಕಾಗುವುದು ಎಂದು ಎಚ್ಚರಿಸಿದರು. ನಂತರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಜಿ.ವಿ.ಪಟ್ಟಣಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.

ಜಯಕರ್ನಾಟಕ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚನ್ನಪ್ಪಗೌಡ ಬಿರಾದಾರ, ಯಲ್ಲಮ್ಮ ಬಾಗೇವಾಡಿ, ಸಾಬವ್ವ ಯಾಳವಾರ, ಸಾವಿತ್ರಿ ಯರಗಲ್, ಸಿದ್ದವ್ವ ಯಾಳವಾರ, ಶಾಂತಾಬಾಯಿ ತಳವಾರ, ಹುಸೇನಬಿ ಅಂಬಳನೂರ, ಲಕ್ಷ್ಮೀ ಯಾಳವಾರ, ಶಾರದಾ ಭಜಂತ್ರಿ, ರೇಣುಕಾ ಹಡಪದ, ಸಿಬ್ಬಂದಿ ರಫೀಕ್ ಬ್ಯಾಕೋಡ, ಮಾಂತಗೌಡ ಬಿರಾದಾರ, ಬಸಲಿಂಗಪ್ಪ ಬಿರಾದಾರ, ಶಂಕರಗೌಡ ಬಿರಾದಾರ, ಸಂಗನಗೌಡ ಬಿರಾದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net