ಕೋಮುವಾದ ಹಿಮ್ಮೆಟ್ಟಿಸುವುದು ಅಗತ್ಯ

04Jaggu10
ಬೆಳಗಾವಿ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಛಲವಾದಿ ಸಮುದಾಯದ ಸಭೆಯಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿದರು. ಸಚಿವ ಡಾ.ಎಚ್.ಸಿ. ಮಹಾದೇವಪ್ಪ, ಸುಭಾಷ ನಾಟಿಕರ, ಬಸವಲಿಂಗ ನಾಗಿದೇವಿ ಸ್ವಾಮೀಜಿ, ಪ್ರದೀಪ ಮಾಳಗಿ, ಪ್ರೊ.ಕೆ.ಡಿ.ಮಂತ್ರೇಶಿ, ಮಲ್ಲೇಶ ಚೌಗಲೆ, ಅರವಿಂದ ಘಟ್ಟಿ ಇತರರಿದ್ದರು.
Published on

ಬೆಳಗಾವಿ: ಪ್ರಸ್ತುತ ದಿನಗಳಲ್ಲಿ ಶೋಷಿತ ಸಮುದಾಯಗಳ ಮೇಲೆ ಬಲಾಢ್ಯ ಸಮುದಾಯಗಳು ಗದಾಪ್ರಹಾರ ಮಾಡುತ್ತಿವೆ. ಸಮಾಜದಿಂದ ಕೋಮುವಾದವನ್ನು ಹಿಮ್ಮೆಟ್ಟಿಸಬೇಕು ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಹೇಳಿದರು.

ಇಲ್ಲಿನ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಛಲವಾದಿ ಸಮುದಾಯದ ಸಭೆಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ. ಅದನ್ನು ಬಲಪಡಿಸಲು ಮತ್ತು ಸಂವಿಧಾನ ರಕ್ಷಣೆಗೆ ನಾವೆಲ್ಲರೂ ಒಗ್ಗಟ್ಟಾಗಬೇಕು ಎಂದರು. ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಛಲವಾದಿ ಸಮುದಾಯಕ್ಕೆ ನಾಯಕತ್ವದ ಕೊರತೆ ಕಾಡುತ್ತಿದೆ. ನಾವು ಸಂಘಟಿತರಾದರೆ ಮಾತ್ರ ರಾಜಕೀಯ ಸೇರಿ ಎಲ್ಲ ರಂಗಗಳಲ್ಲಿ ಭವಿಷ್ಯವಿದೆ. ಕಾಂಗ್ರೆಸ್, ಬಿಜೆಪಿಯವರು ನಮ್ಮ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿದರೂ ಗೆಲ್ಲುವುದು ಕಷ್ಟದ ಮಾತು. ವ್ಯವಸ್ಥಿತವಾಗಿ ನಮ್ಮನ್ಮು ಹತ್ತಿಕ್ಕಲಾಗುತ್ತಿದೆ. ನಮ್ಮ ಸಮಾಜ ಒಗ್ಗಟ್ಟಾಗದಿದ್ದರೆ ರಾಜಕೀಯವಾಗಿ ಶಕ್ತಿ ಬರುವುದಿಲ್ಲ ಎಂದರು. ಛಲವಾದಿ ಮಹಾಸಭಾ ರಾಜ್ಯ ಘಟಕದ ಕಾರ್ಯದರ್ಶಿ ಸುಭಾಷ ನಾಟಿಕರ, ಚಿತ್ರದುರ್ಗದ ಛಲವಾದಿ ಪೀಠದ ಬಸವಲಿಂಗ ನಾಗಿದೇವಿ ಸ್ವಾಮೀಜಿ, ಪ್ರದೀಪ ಮಾಳಗಿ, ಪ್ರೊ. ಕೆ.ಡಿ. ಮಂತ್ರೇಶಿ, ಮಲ್ಲೇಶ ಚೌಗಲೆ, ಅರವಿಂದ ಘಟ್ಟಿ, ಬಸವರಾಜ ರಾಯವ್ವಗೋಳ, ಸುರೇಶ ತಳವಾರ, ಮಹಾವೀರ ಮೋಹಿತೆ, ಮಹಾದೇವ ತಳವಾರ, ಸಾಗರ ಕೋಲಕಾರ, ಶ್ರೀಕಾಂತ ತಳವಾರ, ದುರ್ಗೇಶ ಮೇತ್ರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net