ಕೋಪಕ್ಕೆ ಬುದ್ಧಿ ಕೊಡಬೇಡಿ

CTD 5 MURUGA--03
Published on

ಚಿತ್ರದುರ್ಗ: ಆಷಾಢಮಾಸದಲ್ಲಿ ಯಾವುದೇ ಕಾರ್ಯ ಮಾಡಿದರೂ ಒಳ್ಳೆಯದಾಗುವುದಿಲ್ಲವೆಂಬ ಮೂಢನಂಬಿಕೆ ನೆಲೆಯೂರಿದೆ. ಒಳ್ಳೆಯ ಕೆಲಸಗಳಿಗೆ ಯಾವುದೇ ದಿನ,ಮಾಸ ಕನಿಷ್ಠವಲ್ಲ,ಎಲ್ಲ ದಿನಗಳು ಶ್ರೇಷ್ಠವೆಂದು ಮುರುಘಾ ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾ ಮೀಜಿ ಹೇಳಿದರು.

ಶ್ರೀ ಮುರುಘರಾಜೇಂದ್ರ ಮಠದಲ್ಲಿ ಶನಿವಾರ ಏರ್ಪಡಿಸಿದ್ದ 33ನೇ ವರ್ಷದ 8ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದ ಶ್ರೀಗಳು,ಕಷ್ಟಗಳನ್ನು ತಾಳ್ಮೆಯಿಂದ ಸಹಿಸಿಕೊಳ್ಳುವ ಸ್ವಭಾವವಿರಬೇಕು. ಕೋಪಕ್ಕೆ ಬುದ್ಧಿಕೊಡಬಾರದು. ಅನ್ಯೋನ್ಯತೆಯನ್ನು ಮರೆತು ಬಾಳುವುದರಲ್ಲಿ ಅರ್ಥವಿಲ್ಲ.

ಉತ್ತಮ ಬಾಂಧವ್ಯದೊಂದಿಗೆ ದಂಪತಿ ಸಂಸಾರ ನಡೆಸಬೇಕು. ದೇವರು ಕೊಟ್ಟಿರುವ ಈ ನಮ್ಮ ಜೀವನ ಸತ್ಕಾರ್ಯಕ್ಕೆ ಬಳಕೆ ಆಗಲಿ. ಸತಿ-ಪತಿಗಳು ಹಾಲುಜೇನಿನಂತೆ ಇರಬೇಕು. ಹಣ ಆಸ್ತಿಗಿಂತಲೂ ಒಬ್ಬರನ್ನೊಬ್ಬರು ಅರಿತು ಜೀವನ ಪರ್ಯಂತ ನೆಮ್ಮದಿಯ ಬದುಕುಕಟ್ಟಿಕೊ ಳ್ಳುವುದು ಮುಖ್ಯವೆಂದರು.
ಹಿರೇಮಾಗಡಿ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ,ಮುರುಘಾ ಮಠ ಜಾತಿ ಮತ ಪಂಥ ಭೇದವಿಲ್ಲದ ಏಕೈಕ ಮಠವಾಗಿದೆ. ಬುದ್ಧ ಸಂಸಾರವನ್ನು ಒದ್ದು ಗೆದ್ದ. ಬಸವಣ್ಣ ಸಂಸಾರದಲ್ಲಿದ್ದು ಗೆದ್ದರೆಂದರು. ಮುಖ್ಯಅತಿಥಿ ಬಾಡದ ಆನಂದರಾಜ್ ಮಾತನಾಡಿ,ಗಂಡುಹೆಣ್ಣು ಸಮಾನರೆಂಬ ಭಾವ ವಚನಗಳಲ್ಲಿದೆ ಎಂದರು.
ಅರೆನಹಳ್ಳಿ ತಿಪ್ಪೇಸ್ವಾಮಿ ಮಾತನಾಡಿದರು.ಶಿಕಾರಿಪುರದ ಶ್ರೀ ಶಿವಯೋಗಿ ದೇವರು,ಈಚಲನಾಗೇನಹಳ್ಳಿ ಶ್ರೀ ಗೋವಿಂದಪ್ಪ ಸ್ವಾಮೀ ಜಿ,ಹೊಳವನಹಳ್ಳಿ ಶ್ರೀ ತಿಪ್ಪೇರುದ್ರ ಸ್ವಾಮೀಜಿ ಹಾಗೂ ಶ್ರೀ ಮುರುಘೇಂದ್ರ ಸ್ವಾಮೀಜಿ ಇದ್ದರು. ರೆಡ್ಡಿ(ವರ)-ನಾಯಕ (ವಧು) ಮತ್ತು ಆದಿಕರ್ನಾಟಕ(ವರ)ಒಕ್ಕಲಿಗ (ವಧು)ಅಂತರ್ಜಾತಿ ಸೇರಿ ಮೂರು ಜೋಡಿಗಳ ವಿವಾಹ ನೆರವೇರಿತು. ತೋಟಪ್ಪ ಉತ್ತಂಗಿ ಸಂಗಡಿಗರು ಪ್ರಾರ್ಥಿಸಿದರು. ಜ್ಞಾನಮೂರ್ತಿ ಸ್ವಾಗತಿಸಿ,ಪ್ರಕಾಶ ದೇವರು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net