ಕೋಡ್ಲಿ ಗ್ರಾಮಕ್ಕೂ ವಕ್ಕರಿಸಿದ ಕರೊನಾ

4 kalgi-1
Published on

ಕಾಳಗಿ: ಇದುವರೆಗೆ ನಿರಂಬಳವಾಗಿದ್ದ ಕಾಳಗಿ ತಾಲೂಕಿಗೂ ಕರೊನಾ ವಕ್ಕರಿಸಿದೆ. ಇದರ ಛಾಯೆ ಚಿಂಚೊಳ್ಳಿ ತಾಲೂಕಿನ ಮೇಲೂ ಬಿದ್ದರೂ ಅಚ್ಚರಿಪಡಬೇಕಾಗಿಲ್ಲ.
ಇಲ್ಲಿಗೆ ಸಮೀಪದ ಕೋಡ್ಲಿ ಗ್ರಾಮದ 37 ವರ್ಷದ ವ್ಯಕ್ತಿ (ಪಿ- 642)ಗೆ ಸೋಂಕು ದೃಢಪಟ್ಟಿದೆ. ಸೋಂಕಿತ ವ್ಯಕ್ತಿ ಹೈದರಾಬಾದ್ನಲ್ಲಿ ಕೆಲಸದಲ್ಲದ್ದ. ಏ. 28ರಂದು ಗೂಡ್ಸ್ ಲಾರಿ ಮೂಲಕ ಕಾಳಗಿಗೆ ಬಂದಿದ್ದ. ನಂತರ ದ್ವಿಚಕ್ರ ವಾಹನದಲ್ಲಿ ಕೋಡ್ಲಿಗೆ ಆಗಮಿಸಿದ್ದ. 29ರಂದು ಗ್ರಾಮದಲ್ಲೇ ಕುಟುಂಬಗಳ ಸದಸ್ಯರ ಜತೆ ಉಳಿದಿದ್ದಾನೆ.
ಹೊಟ್ಟೆ ನೋವಿನಿಂದಾಗಿ 30 ರಂದು ಕೋಡ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ತೋರಿಸಿದ್ದಾನೆ. ಇಬ್ಬರು ವೈದ್ಯರು, ಓರ್ವ ನರ್ಸಗೆ ಪರಿಶೀಲಿಸಿದ್ದಾರೆ. ನೋವು ಕಡಿಮೆಯಾಗದ್ದರಿಂದ ಮೇ 1ರಂದು ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದಾನೆ.
ಈತನ ಕಿಡ್ನಿಯಲ್ಲಿ ಸಮಸ್ಯೆಯಿರುವುದು ಪತ್ತೆ ಮಾಡಿದ ವೈದ್ಯರು ಮಂಗಳವಾರ ಶಸ್ತ್ರ ಚಿಕಿತ್ಸೆ ನಡೆಸಲು ನಿರ್ಧರಿಸಿದ್ದರು. ಇದಕ್ಕೂ ಮುನ್ನ ಕೋವಿಡ್- 19 ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ.
ಕರೊನಾ ದೃಢಪಟ್ಟಿದೆ ಎಂದು ತಿಳಿಯುತ್ತಿದ್ದಂತೆ ಶಾಸಕ ಡಾ. ಅವಿನಾಶ ಜಾಧವ್, ಸಹಾಯಕ ಆಯುಕ್ತ ರಮೇಶ ಕೋಲಾರ, ತಹಸೀಲ್ದಾರ್ ನೀಲಪ್ರಭ ಬಬಲಾದ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸುಲೇಪೇಟ್ ಸಿಪಿಐ ವಿ.ಎಸ್.ಸಾಲಿಮಠ, ರಟಕಲ್ ಪಿಎಸ್ಐ ಶಿವಶಂಕರ ಸುಬೇದಾರ್, ಸೆಕ್ಟ್ರಲ್ ಮ್ಯಾಜಿಸ್ಟ್ರೇಟ್ ವೀರೇಂದ್ರ, ಚಿಂಚೋಳಿ ಟಿಎಚ್ಒ ಡಾ. ದೀಪಕ್, ಪ್ರಮುಖರಾದ ಸುರೇಶ ಚಿಕ್ಕರೆಡ್ಡಿ, ಜಗದೇವಿ, ಶರಣಮ್ಮ, ಶ್ರೀದೇವಿ, ರೇವಣಸಿದ್ದಪ್ಪ, ಮಲ್ಲಮ್ಮ ದೊಡ್ಡಮನಿ, ಮಲ್ಲಪ್ಪ ಚಿಂತಕೋಟಿ ಇತರರಿದ್ದರು.

ಕೋಡ್ಲಿ ಸಂಪೂರ್ಣ ಸೀಲ್ಡೌನ್ಕೋಡ್ಲಿ ಗ್ರಾಮವನ್ನು ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ. ಅಲ್ಲದೆ ಸೋಂಕಿತ ಭೇಟಿ ನೀಡಿದ ಸ್ಥಳೀಯ ಆಸ್ಪತ್ರೆಯನ್ನು ಸ್ಯಾನಿಟೈಸರ್ ಮೂಲಕ ಸ್ವಚ್ಛಗೊಳಿಸಲಾಗಿದೆ. ಗ್ರಾಮದಿಂದ ಕಾಳಗಿ, ಕಲಬುರಗಿ, ಚಿಂಚೋಳಿಗೆ ಸಂಪರ್ಕ ಕಲ್ಪಿಸುವ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ಜನರು ತಿರುಗಾಡದಂತೆ ಎಚ್ಚರವಹಿಸಲಾಗುತ್ತಿದೆ. ವೈದ್ಯರು, ನಸರ್್ ಸೇರಿ ಹಲವರು ಕ್ವಾರಂಟೈನ್ಸೋಂಕಿತನ ಸಂಪರ್ಕಕ್ಕೆ ಬಂದಿರಬಹುದಾದ ಪ್ರೈಮರಿ, ಸೆಕೆಂಡರಿ ಕಾಂಟ್ಯಾಕ್ಟ್ ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಈಗಾಗಲೇ ವ್ಯಕ್ತಿಗೆ ಚಿಕಿತ್ಸೆ ನೀಡಿದ ಕೋಡ್ಲಿ ಪ್ರಾಥಮಿಕ ಆಸ್ಪತ್ರೆಯ ಇಬ್ಬರು ವೈದ್ಯರು, ಒಬ್ಬಳು ನಸರ್್, ಸೋಂಕಿತನ ಮನೆಯವರ ರಕ್ತ, ಕಫವನ್ನು ಪಡೆಯಲಾಗಿದೆ. ಎಲ್ಲರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋಡ್ಲಿ ಗ್ರಾಮವನ್ನು ಸೀಲ್ಡೌನ್ ಮಾಡಲಾಗಿದೆ. ಕಂಟೈನ್ಮೆಂಟ್ ಜೋನ್ ಎಂದು ಗುರುತಿಸಲಾಗಿದ್ದು, ಗ್ರಾಮದ ಪ್ರತಿ ಮನೆಗೆ ತೆರಳಿ ರಕ್ತ ಪರೀಕ್ಷೆ ನಡೆಸಲಾಗುವುದು. ಹಾಲು, ದಿನಪತ್ರಿಕೆ, ತರಕಾರಿ ಸೇರಿ ಅಗತ್ಯ ವಸ್ತುಗಳನ್ನು ಮನೆ-ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಅಧಿಕಾರಿಗಳಿಗೆ ಗ್ರಾಮಸ್ಥರ ಸಹಕಾರ ನೀಡಬೇಕು. ಯಾರೂ ಹೆದರುವ ಅವಶ್ಯಕತೆ ಇಲ್ಲ.
| ಡಾ. ಅವಿನಾಶ ಜಾಧವ್, ಶಾಸಕ, ಚಿಂಚೋಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net