ಕೋಡಿಹಳ್ಳಿ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸಿ

Manavi
Published on

ಚಿತ್ರದುರ್ಗ: ಜಿಲ್ಲೆಯ ತಳಕು ಹೋಬಳಿ ಮನ್ನೆ ಕೋಟೆ ಮಜುರೆ ಕೋಡಿಹಳ್ಳಿ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು, ವಿವಿಧ ಸಂಘಟನೆ ಮುಖಂಡರು ಉಪವಿಭಾಗಾಧಿಕಾರಿ ಕಾರ್ತಿಕ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಗ್ರಾಮದಲ್ಲಿ ಕುಡಿಯುವ ನೀರು, ವಿದ್ಯುತ್ ಪೂರೈಕೆ, ಚರಂಡಿ ಸ್ವಚ್ಛತೆ, ರಸ್ತೆಗಳ ನಿರ್ಮಾಣ, ಆರ್‌ಒ ಘಟಕ, ರುದ್ರಭೂಮಿ ಸೇರಿ ಅಗತ್ಯ ಮೂಲ ಸೌಲಭ್ಯಗಳ ಕೊರತೆ ಕಾಡುತ್ತಿವೆ. ಅನೇಕ ದಶಕಗಳಿಂದಲೂ ಈ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಈಗಲೂ ಜೀವಂತವಾಗಿವೆ ಎಂದು ಅಳಲು ತೋಡಿಕೊಂಡರು.

ಮುಂಗಾರು ವೇಳೆ ಮಳೆಯಾದರೆ, ರೈತರು ತಮ್ಮ ಜಮೀನುಗಳಿಗೆ ಹೋಗುವ ಮಾರ್ಗಗಳು ಸರಿಯಿಲ್ಲ. ಹೀಗಾಗಿ ಬಿತ್ತನೆ ಚಟುವಟಿಕೆಯಲ್ಲಿ ತೊಡಗಲು ಕಷ್ಟವಾಗುತ್ತಿದೆ. ಹಾಗಾಗಿ ರಸ್ತೆ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಗ್ರಾಮದ ಸಮಸ್ಯೆಗಳ ಕುರಿತು ಅಧಿಕಾರಿಗಳ ಮುಂದೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ. ಈಗಲಾದರೂ ಜಿಲ್ಲಾಡಳಿತ ಇತ್ತ ಗಮನಹರಿಸಿ ಎಲ್ಲವನ್ನು ಬಗೆಹರಿಸಬೇಕು ಎಂದು ಕೋರಿದರು.

ರಾಜ್ಯ ಮಾದಿಗರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಪ್ರೊ.ಸಿ.ಕೆ.ಮಹೇಶ್ವರಪ್ಪ, ಮುಖಂಡ ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷರಾದ ಎಂ.ಎಚ್.ತಿಪ್ಪೇಸ್ವಾಮಿ, ಡಿ.ಲಿಂಗರಾಜು, ಬಸವರಾಜು ರೆಡ್ಡಿ, ಮಾಜಿ ಸದಸ್ಯರಾದ ಪಿ.ತಿಪ್ಪೇಸ್ವಾಮಿ, ಮಲ್ಲಯ್ಯ, ಪುಟ್ಟಣ್ಣ, ರುದ್ರಣ್ಣ, ರಾಜಶೇಖರ್, ತಿಪ್ಪೇಸ್ವಾಮಿ ಕೋಟಿ, ತಿಪ್ಪೇಶ್, ರಾಜಣ್ಣ, ಬಿ.ಟಿ.ಶಿವರಾಜ್, ಪಲ್ಲಕ್ಕಿ ವೀರಣ್ಣ, ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net