ಕೋಟ್ಯಂತರ ರೂ.ವಂಚನೆ,ಆರೋಪಿಗಳಿಬ್ಬರಿಗೆ ಹೆಡೆಮುರಿ

AREST
Published on

ಚಿತ್ರದುರ್ಗ:ನಗರದ ಹಿರಿಯ ವೈದ್ಯರೊಬ್ಬರನ್ನು ಯಾಮಾರಿಸಿ ಅವರಿಗೆ 1.27 ಕೋಟಿ ರೂ.ಗಳನ್ನು ವಂಚಿಸಿದ್ದ ಆಸ್ಸಾಂ ಮೂಲದ ಇ ಬ್ಬರು ಸೈಬರ್ ವಂಚಕರಿಗೆ ಸಿಇಎನ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ವೈದ್ಯ ಡಾ.ಟಿ.ಕೆ.ಶ್ರೀನಿವಾಸ್ ಶೆಟ್ಟಿ ಅವರಿಗೆ ವಂಚಕರ ಕರೆ ಮಾಡಿ,ನಾವು ಮುಂಬಯಿ ಪೊಲೀಸರು, ನಿಮ್ಮ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್‌ನ್ನು ಬಳಸಿಕೊಂಡು ಮನಿ ಲಾಂಡರಿಂಗ್ ಮಾಡಲಾಗಿದೆ. ಈ ಕುರಿತಂತೆ ತಮ್ಮ ಖಾತೆಯನ್ನು ಆಡಿಟ್ ಮಾಡಬೇಕಿದೆ ಎಂದು ನಂಬಿಸಿ ವೈದ್ಯರನ್ನು ವಂಚಿಸಿದ್ದರು.
ವಂಚಕರ ಈ ಕೃತ್ಯದ ವಿರುದ್ಧ ಶ್ರೀನಿವಾಸ್‌ಶೆಟ್ಟಿ ಅವರು ನಗರದ ಸಿಇಎನ್ ಪೊಲೀಸರಿಗೆ ಆ.23ರಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು ಆಸ್ಸಾಂ ಮೂಲದ ಪಬನ್‌ಕುಮಾರ್ ಹಾಗೂ ಜಾಕೀರ್ ಬೋರಾನನ್ನು ಬಂಧಿಸಿದ್ದಾರೆ. ದೋಚಿದ್ದ ಹಣವನ್ನು ಆರೋಪಿಗಳು ಬೇರೆ,ಬೇರೆ ಖಾತೆಗಳಿಗೆ ವರ್ಗಾಯಿಸಿದ್ದು, ಈ ಪೈಕಿ 16.89 ಲಕ್ಷ ರೂ.ಮೊತ್ತವನ್ನು ಪೊಲೀಸರು ಫ್ರೀಜ್ ಮಾಡಿಸಿದ್ದಾರೆ. ಸಿಇಎನ್ ಡಿವೈಎಸ್‌ಪಿ ಉಮೇಶ್ ಈಶ್ವರ್‌ನಾಯ್ಕ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net