ಕೋಟ್ಯಂತರ ಬಳಕೆದಾರರು ಮೆಚ್ಚಿದ ಫ್ರೀಡಂ ಆ್ಯಪ್

Published on

ನಾಗೇಶ್ ಕಾರ್ಯ ಮೈಸೂರು
ಕೃಷಿ, ಉದ್ಯೋಗ, ಹಣಕಾಸು ಹೂಡಿಕೆಗೆ ಸಂಬಂಧಿಸಿದಂತೆ ಜನರಿಗೆ ಫ್ರೀಡಂ ಆ್ಯಪ್ ಸೂಕ್ತ ಮಾರ್ಗದರ್ಶನ ನೀಡಲಿದೆ.
ಇದೊಂದು ಜೀವನೋಪಾಯ ಶಿಕ್ಷಣ ವೇದಿಕೆಯಾಗಿದ್ದು, ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ಸಲಹೆಗಳನ್ನು ಪಡೆದುಕೊಳ್ಳಬಹುದು. ಕೃಷಿ, ಉದ್ಯೋಗ ಹಾಗೂ ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದಂತೆ ಪರಿಣಿತ ತಜ್ಞರು ಸಲಹೆ ನೀಡಲಿದ್ದಾರೆ. ಬಹುಮುಖ್ಯವಾಗಿ ಕೃಷಿ ಕ್ಷೇತ್ರ ಲಾಭದಾಯಕವಲ್ಲ ಎಂದು ಬಹುತೇಕರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇದರಲ್ಲಿ ಲಾಭಕ್ಕಿಂತ ನಷ್ಟವೇ ಅಧಿಕ ಎಂದು ಜನರು ತಿಳಿದುಕೊಂಡಿರುವ ಪರಿಣಾಮ ಬೇಸಾಯದಿಂದ ವಿಮುಖವಾಗುತ್ತಿದ್ದಾರೆ. ಆದರೆ ಫ್ರೀಡಂ ಆ್ಯಪ್‌ನಲ್ಲಿ ಕೃಷಿ ಕ್ಷೇತ್ರದಲ್ಲಿ ಅಧಿಕ ಲಾಭ ಗಳಿಸುವ ಸಾಧ್ಯತೆ ಇದೆ ಎಂದು ತಜ್ಞರ ಅಭಿಪ್ರಾಯದ ಮೂಲಕ ಸಮಗ್ರವಾಗಿ ತಿಳಿಸಿಕೊಡಲಾಗುತ್ತದೆ.
ಕೃಷಿ, ಉದ್ಯೋಗ ಹಾಗೂ ವೈಯಕ್ತಿಕ ಹಣಕಾಸು ಈ ಮೂರು ವಿಭಾಗದಲ್ಲಿ 37 ಜೀವನೋಪಾಯ ಗುರಿಗಳನ್ನು ಹೊಂದಲಾಗಿದೆ. ಈ 37 ಗುರಿಗಳಲ್ಲಿ ಸುಮಾರು 1015ಕ್ಕೂ ಹೆಚ್ಚು ಕೋರ್ಸ್‌ಗಳಿವೆ. ಹೀಗಾಗಿ ಯಾರಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಹಾಗೂ ಅವಕಾಶ ಇದೆ ಎಂಬುದು ಅರಿತುಕೊಂಡು ಯಶಸ್ವಿ ಉದ್ಯೋಗ ಕೈಗೊಳ್ಳಬಹುದಾಗಿದೆ.
ಹೈನುಗಾರಿಕೆಯಲ್ಲಿ 17 ಕೋರ್ಸ್‌ಗಳು, ಹಣ್ಣು ಕೃಷಿ-60 ಕೋರ್ಸ್, ಕೃಷಿ ಕ್ಷೇತ್ರವನ್ನು ಪ್ರೋತ್ಸಾಹಿಸಲು ಸರ್ಕಾರ ರೂಪಿಸಿರುವ ಯೋಜನೆಗಳ ಕುರಿತು 6 ಕೋರ್ಸ್‌ಗಳು, ಮೀನು, ಕೋಳಿ, ಕುರಿ ಸಾಕಣೆ ಕುರಿತು ಕೋರ್ಸ್‌ಗಳು, ರೈತರಿಗೆ ಲಾಭದಾಯಕವಾದ ಸಮಗ್ರ ಕೃಷಿಯ ಬಗ್ಗೆ 72 ಕೋರ್ಸ್‌ಗಳು, ಜೇನು ಕೃಷಿ, ತೋಟಗಾರಿಕೆ ಬೆಳೆಗಳು ಸೇರಿದಂತೆ ಹಲವು ಲಾಭದಾಯಕ ಗುರಿಗಳ ಕುರಿತು ಸಂಪೂರ್ಣವಾದ ಮಾಹಿತಿಯನ್ನು ಫ್ರೀಡಂ ಆ್ಯಪ್ ಒಳಗೊಂಡಿದೆ.

1 ಕೋಟಿ ಬಳಕೆದಾರರು
ಫ್ರೀಡಂ ಆ್ಯಪ್ ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ಮಲಯಾಳಂ ಭಾಷೆಗಳಲ್ಲಿ ಲಭ್ಯವಿದ್ದು, ಸುಮಾರು 1 ಕೋಟಿ ಬಳಕೆದಾರರು ಇದ್ದಾರೆ. ಈ ಎಲ್ಲ ಬಳಕೆದಾರರು ತಮಗೆ ಇಷ್ಟವಾದ ಉದ್ಯಮದಲ್ಲಿ ತೊಡಗಿಸಿಕೊಂಡು ಉತ್ತಮ ಲಾಭ ಗಳಿಸಿದ್ದಾರೆ. ಹೀಗಾಗಿ ಕೋಟ್ಯಂತರ ಬಳಕೆದಾರರು ಮೆಚ್ಚುಗೆಗೆ ಪಾತ್ರವಾದ ಆ್ಯಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪೋಷಿತ್ ವ್ಯವಸ್ಥಾಪಕ, ಫ್ರೀಡಂ ಆ್ಯಪ್

ದೇಶದ ನಂ.1 ಆ್ಯಪ್

ಭಾರತರದ ನಂಬರ್ ಒನ್ ಜೀವನೋಪಾಯ ಶಿಕ್ಷಣ ವೇದಿಕೆ ಎಂಬ ಹಿರಿಮೆಗೆ ಪಾತ್ರವಾಗಿದೆ. ಈ ಆ್ಯಪ್‌ನಲ್ಲಿ ಮಾತ್ರ 1000ಕ್ಕೂ ಹೆಚ್ಚು ಯಶಸ್ವಿ ಮಾರ್ಗದರ್ಶಕರಿಂದ ಕೃಷಿ ಕ್ಷೇತ್ರ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಯಶಸ್ವಿಗೆ ರಹಸ್ಯಗಳನ್ನು ತಿಳಿಸಿಕೊಡಲಾಗಿದೆ.

3000ಕ್ಕೂ ಹೆಚ್ಚು ಜನರಿಗೆ ಮಾಹಿತಿ
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಜ.27ರಿಂದ ಆಯೋಜಿಸಿರುವ ಮೂರು ದಿನಗಳ ರಾಜ್ಯ ಮಟ್ಟದ ಕೃಷಿ ಮೇಳದಲ್ಲಿ ತೆರೆದಿರುವ ಪ್ರೀಡಮ್ ಆ್ಯಪ್ ಮಳಿಗೆಗೆ ಮೊದಲೇ ದಿನವೇ ನಿರೀಕ್ಷೆಗೂ ಮೀರಿ ಜನರು ಭೇಟಿ ನೀಡಿದ್ದರು. 3000 ಕ್ಕೂ ಹೆಚ್ಚು ಜನರು ಭೇಟಿ ಅಗತ್ಯ ಮಾಹಿತಿ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net