ಕೋಟೆಯಲ್ಲಿನ ತೋಪು ಕಣ್ಮರೆ, ತನಿಖೆಗೆ ಒತ್ತಾಯ

SAMSUN MALIKERI
Published on

ಯಾದಗಿರಿ: ನಗರದ ಹೃದಯ ಭಾಗದಲ್ಲಿನ ಐತಿಹಾಸಿಕ ಕೋಟೆಯ ಮೇಲಿದ್ದ 7 ತೋಪುಗಳಲ್ಲಿ 4 ನಾಪತ್ತೆಯಾಗಿದ್ದು, ಈ ಬಗ್ಗೆ ಜಿಲ್ಲಾಡಳಿತ ತನಿಖೆ ನಡೆಸುವಂತೆ ಜಿಲ್ಲಾ ಕಾಂಗ್ರೆಸ್ ವಕ್ತಾರ ಸ್ಯಾಮಸನ್ ಮಾಳಿಕೇರಿ ಆಗ್ರಹಿಸಿದ್ದಾರೆ.

ಕೋಟೆಯಲ್ಲಿ ಕಳೆದ ಮೂರ್ನಾಲ್ಕು ದಶಕದ ಹಿಂದೆ 7 ತೋಪುಗಳಿದ್ದವು. ಆದರೆ, ಇದೀಗ ಮೂರು ಮಾತ್ರ ಕಣ್ಣಿಗೆ ಕಾಣುತ್ತಿದ್ದು, ಉಳಿದ 4 ಯಾರು ಕಳ್ಳತನ ಮಾಡಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಕಲ್ಯಾಣದ ಚಾಲುಕ್ಯರು, ಸಗರ ವಂಶಸ್ಥರು ಆಳಿದ ಯಾದಗಿರಿ ಕೋಟೆಗೆ ಇತಿಹಾಸದಲ್ಲಿ ಮಹತ್ವದ ಸ್ಥಾನವಿದೆ. ಅಲ್ಲದೆ, ತೋಪುಗಳು ನಮ್ಮ ಗತ ಇತಿಹಾಸವನ್ನು ಸಾರಿ ಹೇಳುವ ಮಹತ್ವದ ಕುರುಹುಗಳಾಗಿವೆ. ಅವುಗಳನ್ನು ಕೋಟೆಯಿಂದ ಒಂದೇ ದಿನ ಸಾಗಿಸುವುದು ಸಹ ಅಸಾಧ್ಯದ ಮಾತು. ಮಣಭಾರದ ತೋಪುಗಳನ್ನು ವ್ಯವಸ್ಥಿತವಾಗಿ ಸಾಗಾಟ ಮಾಡಿದೆ ಶಂಕೆ ಕಾಡುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಪ್ರವಾಸೋದ್ಯಮ ಹಾಗೂ ಪ್ರಾಚ್ಯವಸ್ತು ಇಲಾಖೆಗಳಿಗೆ ಯಾದಗಿರಿ ಕೋಟೆಯ ಅಭಿವೃದ್ಧಿ ಬೇಡವಾಗಿದೆ. ಸಧ್ಯ ಇರುವ ತೋಪುಗಳ ರಕ್ಷಣೆ ಜತೆಗೆ ಕೋಟೆ ಅಭಿವೃದ್ಧಿಗೆ ಜಿಲ್ಲಾಡಳಿತ ಮುಂದಾಗಬೇಕಿದೆ. ಈಗಾಗಲೇ ಕೋಟೆ ಸುತ್ತಮುತ್ತಲಿನ ಜಾಗ ಅತಿಕ್ರಮಣವಾಗಿದ್ದು, ಅದನ್ನು ಸವರ್ೇ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಲ್ಲದೆ, ಕೋಟೆಯ ರಕ್ಷಣೆಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ನಿತ್ಯ ಸಂಜೆಯಾದರೆ ಸಾಕು ಅನೈತಿಕ ಚಟುವಟಿಕೆ ತಾಣವಾಗುತ್ತಿದ್ದು, ಅಲ್ಲಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net