ಕೋಟೆಯಲ್ಲಿ ಎರಡನೇ ಸುತ್ತಿನ ಸ್ವಚ್ಛತಾ ಕಾರ್ಯ

Capture
Published on

ಬಸವಕಲ್ಯಾಣ: ನಗರದ ಐತಿಹಾಸಿಕ ಕೋಟೆಯಲ್ಲಿ ಎರಡನೇ ಸುತ್ತಿನ ಸ್ವಚ್ಛತಾ ಅಭಿಯಾನ ನಿಮಿತ್ತ ಭಾನುವಾರ ಜಿಲ್ಲಾಧಿಕಾರಿ ಗೋವಿಂದ ರಡ್ಡಿ ಹಾಗೂ ಎಸ್ಪಿ ಡೆಕ್ಕಾ ಕಿಶೋರಬಾಬು ನೇತೃತ್ವದಲ್ಲಿ ಜರುಗಿತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕೋಟೆಯ ವಿವಿಧ ಭಾಗದಲ್ಲಿ ಬೆಳೆದ ಹುಲ್ಲು, ಮುಳ್ಳು ಕಂಟಿ, ಕಸ ತೆಗೆದು ಸ್ವಚ್ಛಗೊಳಿಸಲಾಯಿತು.

ಎಲ್ಲ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಪೌರಕಾರ್ಮಿಕರು, ಎನ್ಎಸ್ಎಸ್, ಎನ್ಸಿಸಿ, ಕಾಲೇಜಿನ ವಿದ್ಯಾಥರ್ಿಗಳು ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದರು. ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಿ ಕೋಟೆಯ ಒಂದೊಂದು ಭಾಗವನ್ನು ಜವಾಬ್ದಾರಿ ವಹಿಸಲಾಗಿತ್ತು. ತಂಡದ ಸದಸ್ಯರು ತಮಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಸ್ವಚ್ಛತಾ ಕಾರ್ಯವನ್ನು ಗಮನಿಸಿದ ಡಿಸಿ ಮತ್ತು ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕೋಟೆಯ ಗೋಡೆಗಳಲ್ಲಿ ಮತ್ತು ಅವುಗಳ ಮೇಲೆ ಬೆಳೆದಿರುವ ಗಿಡಬಳ್ಳಿ ತೆರವು ಕೆಲಸ ನುರಿತರಿಗೆ ಒಪ್ಪಿಸಬೇಕು. ಇದಕ್ಕೆ ಬೇಕಿರುವ ಅನುದಾನ ನೀಡಲಾಗುವುದು. ಆಗಸ್ಟ್ 15ರ ವರೆಗೆ ಸ್ವಚ್ಛತಾ ಕಾರ್ಯ ಮುಗಿಸಬೇಕು. ಅಂದು ಜನರನ್ನು ಆಕರ್ಷಿಸುವಂತೆ ಕೋಟೆಗೆ ವಿಶೇಷ ಅಲಂಕಾರ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಗೋವಿಂದ ರಡ್ಡಿ ತಿಳಿಸಿದರು.

ನಗರಸಭೆ ಅಧ್ಯಕ್ಷೆ ಶಹಜಹಾನ್ ಶೇಖ ತನ್ವೀರ್ ಅಹ್ಮದ್, ಸಹಾಯಕ ಆಯುಕ್ತ ರಮೇಶ ಕೋಲಾರ, ಹುಮನಾಬಾದ್ ಎಎಸ್ಪಿ ಶಿವಾಂಶು ರಾಜಪುತ, ತಹಸೀಲ್ದಾರ್ ಸಾವಿತ್ರಿ ಸಲಗರ, ತಾಪಂ ಇಒ ಕಿರಣ ಪಾಟೀಲ್, ಬಿಇಒ ಸಿ.ಜಿ.ಹಳ್ಳದ, ಸಹಾಯಕ ನಿದರ್ೇಶಕ ಅರುಣಕುಮಾರ ಪಾಟೀಲ್, ಸಿಇಇ ಸಂಯೋಜಕ ವೀರಾರೆಡ್ಡಿ ಇತರರಿದ್ದರು. ಜಿಲ್ಲಾಡಳಿತ, ತಾಲೂಕು ಆಡಳಿತದಿಂದ ವಿವಿಧ ಇಲಾಖೆ ಸಹಯೋಗದೊಂದಿಗೆ ಕಳೆದ 3ರಂದು ಕೋಟೆ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net