ಕೋಟೆಯಲ್ಲಿ ಆಯಾ ತಪ್ಪಿ ಬಿದ್ದ ವ್ಯಕ್ತಿಗೆ ನೆರವು

Kote
Published on

ಚಿತ್ರದುರ್ಗ: ಕೋಟೆ ವೀಕ್ಷಣೆ ವೇಳೆ ವೀರವನಿತೆ ಒನಕೆ ಓಬವ್ವನ ಕಿಂಡಿ ಬಳಿ ಆಯಾ ತಪ್ಪಿ ಕಾಲು ಜಾರಿ ಬಿದ್ದ ದಾವಣಗೆರೆ ನಗರದ ನಿಟುವಳ್ಳಿ ಬಡಾವಣೆಯ ವಾಸಿ ಮಹಮ್ಮದ್ ರಫಿಕ್ ಎಂಬಾತನ ನೆರವಿಗೆ ಕೋಟೆ ಭದ್ರತಾ ಸಿಬ್ಬಂದಿ ಧಾವಿಸಿದರು.

ಜನಸಂದಣಿ ಹೆಚ್ಚಾದ್ದ ಕಾರಣ ಕಿಂಡಿ ಬಳಿ ನೂಕುನುಗ್ಗಲು ಉಂಟಾಗಿ ಕಾಲು ಜಾರಿದ್ದರ ಪರಿಣಾಮ ನೆಲಕ್ಕೆ ಬಿದ್ದು ನಿತ್ರಾಣಗೊಂಡರು. ಮೂಳೆಗೆ ಪೆಟ್ಟಾಗಿ ನಡೆಯಲು ಸಾಧ್ಯವಾಗದ ಕಾರಣ ಸ್ಥಳದಲ್ಲಿದ್ದ ಸಿಬ್ಬಂದಿ ಹೆಗಲ ಮೇಲೆ ಹೊತ್ತುಕೊಂಡು ಕೋಟೆ ದ್ವಾರದವರೆಗೂ ಕರೆತಂದು ಆಸ್ಪತ್ರೆಗೆ ಕಳುಹಿಸಲು ನೆರವಾದರು.

ಭದ್ರತಾ ಸಿಬ್ಬಂದಿಗಳಾದ ಗುರು, ಅಖಿಲೇಶ್, ಭೋಲ ರಾಮ್, ಪ್ರವಾಸಿ ಮಿತ್ರರಾದ ವೈ.ಬಿ.ತಿಪ್ಪೇಸ್ವಾಮಿ, ಅಭಿಲಾಷ್, ಮಾರ್ಗದರ್ಶಿ ಮೊಹಿದ್ದೀನ್ ಖಾನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net