ಕೋಟೆನಾಡಲ್ಲಿ ಹಬ್ಬಗಳ ಸಂಭ್ರಮ..!

bkt-29-1 a
ಬಾಗಲಕೋಟೆ ನಗರದ ಮಾರುಕಟ್ಟೆಯಲ್ಲಿ ಶನಿವಾರ ಕಂಡು ಬಂದ ಜನ ಜಂಗುಳಿ.
Published on

ಸ0ತೋಷ ದೇಶಪಾಂಡೆ ಬಾಗಲಕೋಟೆ: ಹಿಂದುಗಳ ಯುಗಾದಿ ಹಬ್ಬ, ಮುಸ್ಲಿಂ ಸಮಾಜದ ರಂಜಾನ್ ಎರಡು ಪ್ರಮುಖ ಹಬ್ಬಗಳು ಏಕಕಾಲಕ್ಕೆ ಬಂದಿರುವುದು ಕೋಟೆನಾಡಲ್ಲಿ ಸಂಭ್ರಮಕ್ಕೆ ಕಾರಣವಾಗಿದ್ದು, ಜಿಲ್ಲೆಯ ನಾನಾ ಮಾರುಕಟ್ಟೆಯಲ್ಲಿ ಶನಿವಾರ ಜನ ಜಂಗುಳಿ ಕಂಡು ಬಂದಿತು.

ಯುಗಾದಿ ಹಿಂದು ಪಂಚಾ0ಗದ ಪ್ರಕಾರ ಹೊಸ ವರ್ಷದ ಆರಂಭ. ಹಿಂದುಗಳ ಪಾಲಿಗೆ ಇದು ವಿಶೇಷ ದಿನವಾಗಿದ್ದು, ಭಾನುವಾರ ಶ್ರೀವಿಶ್ವಾವಸು ನಾಮ ಸಂವತ್ಸರ ಆರಂಭವಾಗಲಿದೆ ಹಾಗೂ ಮುಸ್ಲಿಂ ಸಮುದಾಯದ ಪ್ರಮುಖ ಹಬ್ಬವಾಗಿರುವ ರಂಜಾನ್ ಸೋಮವಾರ ನಡೆಯಲಿದೆ. ಹೀಗಾಗಿ ಜಿಲ್ಲೆಯಲ್ಲಿ ಹಬ್ಬಗಳ ಸಂತಸ ಮೇಳೈಸ ತೊಡಗಿದೆ.

ಜಿಲ್ಲಾ ಕೇಂದ್ರ ಸ್ಥಾನ ಬಾಗಲಕೋಟೆ, ಮುಧೋಳ, ಜಮಖಂಡಿ, ರಬಕವಿ-ಬನಹಟ್ಟಿ, ಅಮೀನಗಢ, ಕಮತಗಿ, ಹುನಗುಂದ, ಇಳಕಲ್ಲ, ಗುಳೇದಗುಡ್ಡ, ಬಾದಾಮಿ, ಕೆರೂರ, ಬೀಳಗಿ, ಕಲಾದಗಿ ಸೇರಿದಂತೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಿವಿಧ ವಸ್ತುಗಳ ಖರೀದಿ ಭರಾಟೆ ಭರ್ಜರಿಯಾಗಿ ನಡೆಯಲಿದ್ದು, ಇದರಿಂದ ವ್ಯಾಪಾರಸ್ಥರಲ್ಲಿ ಮುಖದಲ್ಲಿ ಮಂದಹಾಸ ಮೂಡಿತು. ಎರಡು ಮೂರು ದಿನಗಳಲ್ಲಿ ಜಿಲ್ಲೆಯಲ್ಲಿ ೫ ಸಾವಿರ ಕೋಟಿ ರೂ. ಹೆಚ್ಚು ವಹಿವಾಟು ನಡೆಯುವ ನಿರೀಕ್ಷೆ ಇದೆ.

ಯುಗಾದಿ ಅಂಗವಾಗಿ ಬಾಗಲಕೋಟೆ ಕಣವಿ ವೀರಭದ್ರೇಶ್ವರ, ಮೋಟಗಿ ಬಸವೇಶ್ವರ ದೇವಸ್ಥಾನ, ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನ, ಶಕ್ತಿ ಪೀಠ ಬಾದಾಮಿ ಬನಶಂಕರಿ, ಕೂಡಲಸಂಗಮದ ಸಂಗಮೇಶ್ವರ ದೇವಸ್ಥಾನ, ಚಿಕ್ಕಮ ಸಂಗಮದ ಸಂಗಮೇಶ್ವರ ದೇವಸ್ಥಾನ, ಮಹಾಕೂಟದ ಮಹಾಕೂಟೇಶ್ವರ ದೇವಸ್ಥಾನ ಸೇರಿದಂತೆ ನಗರ ಹಾಗೂ ಗ್ರಾಮೀಣ ಪ್ರದೇಶದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಲಿದ್ದು, ಈಗಾಗಲೇ ಸಿದ್ಧತೆಗಳು ಪೂರ್ಣಗೊಂಡಿವೆ. ಭಾನುವಾರ ಸಂಜೆ ವಿವಿಧೆಡೆ ರಥೋತ್ಸವ ನಡೆಯಲಿವೆ.

ತುಳಸಿಗೇರಿ ಆಂಜನೇಯ ದೇವಸ್ಥಾನ ಸೂರ್ಯ ರಶ್ಮಿ ವಿಸ್ಮಯ ನಡೆಯಲಿದೆ. ಗುಳೇದಗುಡ್ಡ ಇಲಾಳ ಮ್ಯಾಳದವರಿಂದ -Àಲ ಭವಿಷ್ಯ ನಡೆಯಲಿದೆ. ನೇಕಾರ ವ್ಯಾಪಾರ, ಜೋಳ, ಗೋಽ ಸೇರಿದಂತೆ ದವಸ ಧಾನ್ಯಗಳ ಬೆಲೆ ಮಳೆ, ಬೆಳೆ ಬಗ್ಗೆಯೂ ಭವಿಷ್ಯ ನುಡಿಯಲಾಗುತ್ತದೆ. ಸಾವಿರಾರು ಜನ ಇದಕ್ಕೆ ಸಾಕ್ಷಿಯಾಗಲಿದೆ.

ಯುಗಾದಿ ಹಿನ್ನಲೆಯಲ್ಲಿ ಬೈಕ್, ಕಾರು, ಪ್ರೀಡ್ಜ್, ಟಿವಿ ಬುಕ್ ಮಾಡಲಾಗಿದೆ. ಹೊಸ ಬಟ್ಟೆಗಳ ಖರೀದಿಗೆ ಜನರು ಮುಗಿ ಬಿದಿದ್ದಾರೆ. ಈ ಸಾರಿ ಉತ್ತಮ ಮಳೆ-ಬೆಳೆ ಆಗಿದ್ದರಿಂದ ಕೃಷಿಕರು ಸಂತಸಗೊAಡಿದ್ದು, ಮುಂಬರುವ ವರ್ಷದಲ್ಲಿ ಇದೇ ರೀತಿ ಕೃಪೆ ತೋರು ಅಂತ ಪ್ರಾರ್ಥಿಸಿ ಯುಗಾದಿ ದಿನ ರೈತರು ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಲಿದ್ದಾರೆ. ಹೊಲಕ್ಕೆ ಕೊಟ್ಟಿಗೆ ಗೊಬ್ಬರ, ಗಳೆ ಹೊಡೆಯುವುದು, ಬೀಜಗಳನ್ನು ಸಂಗ್ರಹಿಸಿದ್ದು ಪೂಜೆ ಸಲ್ಲಿಸಲಿದ್ದಾರೆ. ಇನ್ನು ಮಾರುಕಟ್ಟೆಯಲ್ಲಿ ಬೇವು-ಬೆಲ್ಲ, ಹೂ, ತರಕಾರಿ ಖರೀದಿ ಜೋರಾಗಿತ್ತು, ಬೆಲೆ ಏರಿಕೆಯ ಬಿಸಿ ನಡುವೆಯೂ ಮಾರುಕಟ್ಟೆಯಲ್ಲಿ ವಿವಿಧ ವಸ್ತುಗಳನ್ನು ತಮ್ಮದಾಗಿಸಿಕೊಳ್ಳಲು ಸಾರ್ವಜನಿಕರು ಆಸಕ್ತಿ ತೋರಿದರು. ಬೇಸಿಗೆಯ ಸುಡು ಬಿಸಿಲಿನ ನಡುವೆಯೂ ಹಬ್ಬದ ಸಂಭ್ರಮ ಇಮ್ಮಡಿಗೊಂಡಿದೆ.

ಹೊಸ ಸಂವತ್ಸರ ಹಿನ್ನಲೆಯಲ್ಲಿ ಪ್ರಕೃತಿಯಲ್ಲಿನ ಗಿಡ-ಮರ-ಬಳ್ಳಿಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ವಿಶೇಷವಾಗಿ ಬೇವಿನ ಮರಗಳು ಹೂವು ತುಂಬಿಕೊAಡು ನಳನಳಿಸುತ್ತಿವೆ. ಯುಗಾದಿ ಪಾಡ್ಯದ ದಿನದಂದು ನೀರಿನಲ್ಲಿ ಬೇವಿನ ಹೂವು, ಎಲೆ ಬೆರೆಸಿ ಸ್ನಾನ ಮಾಡುವುದು ವಾಡಿಕೆ. ಹೀಗಾಗಿ ಜನರು ಬೇವಿನ ಗಿಡದಲ್ಲಿ ಹೂವು, ಎಲೆಗಳನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು ಶನಿವಾರ ಬಂದಿತು.

ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬವನ್ನು ಜಿಲ್ಲಾದ್ಯಂತ ಸೋಮವಾರ ಸಂಭ್ರಮ ಮತ್ತು ಸಡಗರದಿಂದ ಆಚರಿಸಲು ಎಲ್ಲ ರೀತಿಯ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಬೆಳಗ್ಗೆ ಜಿಲ್ಲೆಯ ವಿವಿಧ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಇರುವ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಕಳೆದ ಒಂದು ತಿಂಗಳಿAದ ಆಚರಿಸಿಕೊಂಡು ಬಂದಿದ್ದ ಉಪವಾಸ ವೃತವನ್ನು ಮುಕ್ತಾಯಗೊಳಿಸಲಿದ್ದಾರೆ.

ಹಬ್ಬದ ಅಂಗವಾಗಿ ಶನಿವಾರ ಮಾರುಕಟ್ಟೆಯಲ್ಲಿ ಪಾಲಕರು, ಹಿರಿಯರು ತಮ್ಮ ಕುಟುಂಬಕ್ಕೆ ಹೊಸ ಬಟ್ಟೆಗಳ ಖರೀದಿಗೆ ಮುಂದಾದರು. ಹಬ್ಬದ ಪ್ರಯುಕ್ತ ತಯಾರಿಸಲಾಗುವ ಸುರಕುಂಬ ಮತ್ತು ವಿವಿಧ ವಿಶೇಷ ಖಾದ್ಯಗಳಿಗೆ ಬೇಕಾಗುವ ಆಹಾರಗಳನ್ನು ಖರೀದಿಸಲು ಮುಗಿಬಿದ್ದರು. ಸೋಮವಾರ ಪ್ರಾರ್ಥನೆ ಸಲ್ಲಿಸಿದ ನಂತರ ವಿವಿಧ ಮಸೀದಿ, ಈದ್ಗಾ ಮೈದಾನದ ಹೊರ ಭಾಗದಲ್ಲಿ -Àಕೀರರಿಗೆ ಧಾನ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net