

ಬಾಗಲಕೋಟೆ: ಜಿಲ್ಲೆಯಾದ್ಯಂತ ೭೮ ನೇ ಸ್ವಾಂತ್ರ‍್ಯೋತ್ಸವವನ್ನು ಶಾಲಾ, ಕಾಲೇಜು, ಸಂಘ, ಸಂಸ್ಥೆ, ಸರ್ಕಾರಿ ಕಚೇರಿ, ಬ್ಯಾಂಕ್‌ಗಳಲ್ಲಿ ಸಂಭ್ರಮ, ಸಡಗರಿಂದ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಭಾರತ ಮಾತೆಯ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು….!!
ಕಾಮಧೇನು ಸಂಸ್ಥೆಯಿಂದ
ನಗರದ ಸಂಸ್ಥೆಯ ಕಾರ್ಯಾಲಯ ಆವರಣದಲ್ಲಿ ರಾಷ್ಟ್ರಧ್ವಜ ರೋಹಣ ಮಾಡುವ ಮುಖಾಂತರ ಸ್ವಾತಂತ್ರ‍್ಯೋತ್ಸವ ಆಚರಿಸಲಾಯಿತು. ಜಿಲ್ಲಾ ಆಸ್ಪತ್ರೆ ವೈದ್ಯ ಡಾ.ವಿಜಯಕುಮಾರ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಅಧ್ಯಕ್ಷ ರವಿ ಕುಮುಟಗಿ , ಕಾರ್ಯದರ್ಶಿ ವಿಜಯ ಸುಲಾಖೆ, ಬಸವರಾಜ ಕಟಗೇರಿ, ಅಶೋಕ ಮಹಿಂದ್ರಕರ, ಬಸವರಾಜ ಪಾತ್ರೋಟಿ, ರಾಜು ಗೌಳಿ, ಅರುಣ ಲೋಕಾಪೂರ, ಶಿವರಾಜ ಬಾಲಪ್ಪನವರ, ವಿಜಯ ಹೂಗಾರ ಇತರರು ಇದ್ದರು.
ಕಸಾಪ ಆವರಣದಲ್ಲಿ…
ನವನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ನಡೆದ ೭೮ ನೇ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವೀರೇಶ ಬಡಿಗೇರ ಧ್ವಜಾರೋಹಣ ನೆರವೇರಿಸಿದರು. ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಡಾ.ಚಂದ್ರಶೇಖರ ಕಾಳನ್ನವರ, ಶಂಕರ ಹೂಲಿ, ಡಾ.ಗೀತಾ ದಾನಶೆಟ್ಟಿ, ವಿಜಯಶ್ರೀ ಮುರನಾಳ, ಕತೆಗಾರ ಪ್ರಕಾಶ ಡಂಗಿ ಸೇರಿದಂತೆ ಕಸಾಪ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ತೇಜಸ್ ಶಾಲೆಯಲ್ಲಿ
ನಗರದ ತೇಜಸ್ ಅಂತರಾಷ್ಟ್ರೀಯ ಶಿಕ್ಷಣ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ ೭೮ನೇ ಸ್ವಾತಂತ್ರ‍್ಯ ದಿನೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಮಾಧುರಿ ಮುಧೋಳ ಧ್ವಜಾರೋಹಣ ನೆರವೇರಿಸಿದರು.
ಆಡಳಿತ ಅಧಿಕಾರಿ ಡಾ.ಶಿವಕುಮಾರ ಗಂಗಾಲ, ಪ್ರಾಂಶುಪಾಲ ಡಾ.ಪ್ರಹ್ಲಾದ ಗಂಗಾವತಿ, ಪ್ರಾಂಶುಪಾಲ ಸಚಿನ ಭಾತ್ರ, ಪಿಯು ಪ್ರಾಂಶುಪಾಲರಾದ ಕ್ಯಾಪ್ಟನ್ ಶಶಾಂಕ ದೀಕ್ಷಿತ, ದೈಹಿಕ ಶಿಕ್ಷಕ ಸದಾಶಿವ ಹಂಚಿನಾಳ ಇತರರು ಇದ್ದರು.
ಅಗಸ್ತ್ಯ ಕೋರ್ ವಿಜ್ಞಾನ ಕೇಂದ್ರ
ಬಾಗಲಕೋಟೆ: ನವನಗರದ ಅಗಸ್ತ್ಯ ಕೋರ್ ವಿಜ್ಞಾನ ಕೇಂದ್ರದಲ್ಲಿ ೭೮ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ನಿವೃತ್ತ ಡೈಟ್ ಉಪನ್ಯಾಸಕ ಜಿ.ಎಚ್. ಮುಂಡೆವಾಡಿ ಧ್ವಜಾರೋಹಣ ನೇರವೇರಿಸಿದರು.ವಿಜ್ಞಾನ ಕೇಂದ್ರದ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನವನಗರ ಸ.ಪ್ರ.ದ.ಕಾಲೇಜಿನಲ್ಲಿ
ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆದ ೭೮ ನೇ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಅರುಣಕುಮಾರ ಗಾಳಿ ಧ್ವಜಾರೋಹಣ ನೆರವೇರಿಸಿದರು.
ಬಿಮ್ಸ್ನಲ್ಲಿ ೭೮ನೇ ಸ್ವಾತಂತ್ರೋತ್ಸವ ಆಚರಣೆ
ಬಾಗಲಕೋಟೆ: ನಗರದ ಬಿವಿವಿ ಎಂ.ಬಿ.ಎ ಸಂಸ್ಥೆಯಾದ ಬಿ.ವಿ.ವಿ. ಸಂಘದ, ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ್ ಸ್ಟಡೀಸ್, ವಿದ್ಯಾಗಿರಿ (ಬಿಮ್ಸ್)ನಲ್ಲಿ ೭೮ನೇ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮ ಜರುಗಿತು. ಸಂಸ್ಥೆಯ ನಿರ್ದೇಶಕ ಡಾ.ಪ್ರಕಾಶ್ .ಕೆ. ವಡವಡಗಿ, ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.
ಕಲಾ ಮಹಾವಿದ್ಯಾಲಯ
ಬಾಗಲಕೋಟೆ: ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ೭೮ನೇ ಸ್ವತಂತ್ರ ದಿನಾಚರಣೆ ಕಾರ್ಯಕ್ರಮ ಜರುಗಿತು. ಕಾಲೇಜಿನ ಪ್ರಾಚಾರ್ಯ ಎಸ್.ಆರ್.ಮುಗನೂರಮಠ, ನಿವೃತ್ತ ಪ್ರಾಚಾರ್ಯ ಡಾ. ಬಿ.ಆರ್.ಪಾಟೀಲ, ಮಂಜುನಾಥ ದೇವನಾಳ ಸೇರಿದಂತೆ ಇತರರು ಇದ್ದರು.
ವಿದ್ಯಾ ಪ್ರಸಾರಕ ಮಂಡಳ:
ನಗರದ ವಿದ್ಯಾ ಪ್ರಸಾರಕ ಮಂಡಳದ ವಿವಿಧ ಅಂಗ ಸಂಸ್ಥೆಗಳ ಪರವಾಗಿ ೭೮ನೇ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ಸಕ್ರಿ ಹೈಸ್ಕೂಲ ಮೈದಾನದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮ ಜರುಗಿತು. ಖ್ಯಾತ ವೈದ್ಯ ಡಾ. ಸುಭಾಸ ಪಾಟೀಲ ಧ್ವಜಾರೋಹಣ ನೆರವೇರಿಸಿದರು. ವಿದ್ಯಾ ಪ್ರಸಾರಕ ಮಂಡಳದ ಅಧ್ಯಕ್ಷ ವಿ.ವೈ.ಕವಠೇಕರ, ಕಾರ್ಯಾಧ್ಯಕ್ಷೆ ಶ್ರೀಲತಾ ಹೆರಂಜಲ್, ಗೌರವ ಕಾರ್ಯದರ್ಶಿ ಡಾ. ಗಿರೀಶ ಮಸೂರಕರ, ಉಪಾಧ್ಯಕ್ಷ ಜಿ.ಎನ್. ಕುಲಕರ್ಣಿ, ಆಡಳಿತ ಮಂಡಳಿ ಸದಸ್ಯ ವ್ಹಿ.ಆರ್. ಬುರ್ಲಿ, ಡಾ. ಉಮೇಶ ತಿಮ್ಮಾಪುರ, ಪ್ರಾಚಾರ್ಯ ಶ್ರೀನಿವಾಸ ನರಗುಂದ, ಸಕ್ರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಅಶೋಕ ಕಂದಗಲ್, ಉಪ ಪ್ರಾಚಾರ್ಯ ಬಿ.ಎಚ್.ಲಮಾಣಿ ವೇದಿಕೆ ಮೇಲಿದ್ದರು.