ಕೋಟೆನಗರಿಯಲ್ಲಿ `ಕೈ' ಪಕ್ಷದ ಅದ್ದೂರಿ ಮೆರವಣಿಗೆ

bkt-17-1 (2)
ಬಾಗಲಕೋಟೆ ನಗರದಲ್ಲಿ ಕಾಂಗ್ರೆಸ್ ಅದ್ಧೂರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಅಪಾರ ಸಂಖ್ಯೆಯ ಜನಸ್ತೋಮ.
Published on

ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಸಚಿವ ಎಚ್.ವೈ.ಮೇಟಿ ಸೋಮವಾರ ಅದ್ದೂರಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದರು. ಸಾವಿರಾರು ಜನ ಕಾರ್ಯಕರ್ತರು, ಬೆಂಬಲಿಗರೊಂದು ಕೈ ಪಡೆ ಶಕ್ತಿ ಪ್ರದರ್ಶನ ಮಾಡುವ ಮೂಲಕ ಬಿಜೆಪಿಗೆ ಚುನಾವಣಾ ಕಣಕ್ಕೆ ರಣವೀಳ್ಯ ನೀಡಿತು.
ಬೆಳಗ್ಗೆ ಬಾಗಲಕೋಟೆ ನಗರದ ಹೊಳೇ ಆಂಜನೇಯ ದೇವಸ್ಥಾನ, ಕಿಲ್ಲಾ ರಾಘವೇಂದ್ರ ಸ್ವಾಮಿಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ವಿದ್ಯಾಗಿರಿಯಲ್ಲಿ ಕಾಂಗ್ರೆಸ್ ಕಚೇರಿಗೆ ತೆರಳಿದರು. ಕಾಂಗ್ರೆಸ್ ಅಭ್ಯರ್ಥಿ ಎಚ್.ವೈ.ಮೇಟಿ ತೆರದ ವಾಹನ ಏರುತ್ತಿದ್ದಂತೆ `ಕೈ' ಕಾರ್ಯಕರ್ತರು ಕೇ ಕೇ ಚಪ್ಪಾಳೆಗಳ ಮೂಲಕ ಸ್ವಾಗತ ಕೋರಿದರು. ಪಕ್ಷದ ಕಚೇರಿಯಿಂದ ಆರಂಭವಾದ ಮೆರವಣಿಗೆ ವಿದ್ಯಾಗಿರಿ ಇಂಜಿನಿಯರಿಂಗ್ ಕಾಲೇಜು ವೃತ್ತ, ಕಾಳಿದಾಸ ವೃತ್ತ, ಜಿಲ್ಲಾ ಆಸ್ಪತ್ರೆ, ಬಸವೇಶ್ವರ ಸಹಕಾರಿ ಬ್ಯಾಂಕ್ ರಸ್ತೆ, ಪೊಲೀಸ್ ಪ್ಯಾಲೇಸ್ ಮೂಲಕ ತಹಸೀಲ್ದಾರ ಕಚೇರಿ ತಲುಪಿತು. ಚುನಾವಣೆ ಅಽಕಾರಿಗಳಿಗೆ ನಾಮಪತ್ರ ಸಲ್ಲಿಕೆ ಮಾಡಿ ಅಽಕೃತವಾಗಿ ಎಚ್.ವೈ.ಮೇಟಿ ಅಖಾಡ ಪ್ರವೇಶಿಸಿದರು.
ಏಲ್ಲೆಲ್ಲೂ ಕೈ ಬಾವುಟಗಳು ರಾರಾಜಿಸಿದವು. ಮಾಜಿ ಸಚಿವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಜಿ.ಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ರವೀಂದ್ರ ಕಲಬುರ್ಗಿ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಜಾ-À ಬೇಪಾರಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ ಸೇರಿದಂತೆ ಅನೇಕ ನಾಯಕರು ಸಾಥ್ ನೀಡಿದರು. ಅಲ್ಲದೇ ನಗರದ ಪ್ರಮುಖ ಬೀದಿಗಳಲ್ಲಿ ಡೊಳ್ಳುವಾದಕ್ಕೆ ಕುಣಿದು ಕುಪ್ಪಳಿಸಿದರು.ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ಜಿಪಂ ಮಾಜಿ ಅಧ್ಯಕ್ಷೆ ಬಾಯಕ್ಕಾ ಮೇಟಿ, ಮುಖಂಡರಾದ ಆನಂದ ಜಿಗಜಿನ್ನಿ, ನಾಗರಾಜ ಹದ್ಲಿ, ಉಮೇಶ ಮೇಟಿ, ಅಶೋಕ ಲಾಗಲೂಟಿ, ಎಸ್.ಎನ್.ರಾಂಪೂರ, ಮಹಾಂತೇಶ ಬ್ಯಾಳಿ, ಸಂಗಣ್ಣ ಚಳ್ಳಿಗಿಡದ, ಬಸವರಾಜ ಬಾದಾಮಿ, ಮುತ್ತು ಜೋಳದ, ರಕ್ಷಿತಾ ಭರತಕುಮಾರ ಈಟಿ, ವಿರೇಶ ಹುಂಡೇಕಾರ, ಶಿವಕುಮಾರ ನಂದಿಕೋಲಮಠ ಇತರರು ಇದ್ದರು.

ಕೋಟ್..
ಈ ಹಿಂದೆ ಕೂಡಾ ಕಾಂಗ್ರೆಸ್ ಅಽಕಾರದಲ್ಲಿ ಇದ್ದಾಗ ಉತ್ತಮ ಆಡಳಿತ ನೀಡಿದೆ. ಈ ಸಾರಿ ಮತ್ತೆ ಕಾಂಗ್ರೆಸ್ ಪಕ್ಷ ಅಽಕಾರಕ್ಕೆ ಬರುವುದು ನಿಶ್ಚಿತ. ಸದ್ಯಕ್ಕೆ ನಮ್ಮ ಎದುರಾಳಿ ಯಾರು ಇಲ್ಲ. ಏ.೨೪ ಬಳಿಕ ಗೊತ್ತಾಗಲಿದೆ. ಈ ಸಾರಿ ಬಾಗಲಕೋಟೆ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲವು ಸಾಽಸುವ ವಿಶ್ವಾಸವಿದೆ.

* ಎಚ್.ವೈ.ಮೇಟಿ ಕಾಂಗ್ರೆಸ್ ಅಭ್ಯರ್ಥಿ

ಕೋಟ್..
ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷ ಬೇರುಮಟ್ಟದಿಂದ ಪಕ್ಷ ಕಟ್ಟಲಾಗಿದೆ. ಈಗಾಗಲೇ ಪಕ್ಷಕ್ಕೆ ಶಕ್ತಿ ಬಂದಿದೆ. ನಮ್ಮ ಅಭ್ಯರ್ಥಿ ಎಚ್.ವೈ.ಮೇಟಿ ಅವರಿಗೆ ಶಕ್ತಿ ತುಂಬೋಣ. ರಾಜ್ಯದಲ್ಲಿ ಕಾಂಗ್ರೆಸ್ ಅಽಕಾರಕ್ಕೆ ಬರುವುದು ನಿಶ್ಚಿತ.

* ಎಸ್.ಜಿ.ನಂಜಯ್ಯನಮಠ ಜಿಲ್ಲಾಧ್ಯಕ್ಷ ಕಾಂಗ್ರೆಸ್

ಕೋಟ್..
ರಾಜ್ಯದಲ್ಲಿ ಹಾಗೂ ಬಾಗಲಕೋಟೆಯಲ್ಲಿ ಕಾಂಗ್ರೆಸ್‌ಗೆ ಜನ ಸ್ಪಂದನೆ ಸಿಕ್ಕಿದೆ. ಬಿಜೆಪಿ ದುರಾಡಳಿತಕ್ಕೆ ಬೇಸತ್ತು ಹೋಗಿದ್ದಾರೆ ಜನರು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಪಡೆಯಲಿದೆ. ಬಾಗಲಕೋಟೆ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ವೈ.ಮೇಟಿ ಅಽಕ ಮತಗಳಿಂದ ಗೆಲವು ಸಾಽಸಲಿದ್ದಾರೆ.

* ವೀಣಾ ಕಾಶಪ್ಪನವರ ಜಿ.ಪಂ ಮಾಜಿ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net