ಕೋಟೆನಗರಿಯ ವಿವಿಧೆಡೆ ವರುಣನ ಸಿಂಚನ

Rain
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.37388858, 0.40603584);sceneMode: 32768;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 35;
Published on

ಚಿತ್ರದುರ್ಗ: ಕೋಟೆನಗರಿಯ ವಿವಿಧೆಡೆ ವರುಣನ ಸಿಂಚನವಾಗಿದ್ದು, ಮಂಗಳವಾರ ಕೆಲವೆಡೆ ಹದ ಮಳೆ ಸುರಿಯಿತು. ಅಲ್ಲದೆ, ಬೆಳಗ್ಗೆಯಿಂದ ರಾತ್ರಿವರೆಗೂ ಪ್ರಮುಖ ರಸ್ತೆಗಳಲ್ಲೂ ಜನ ಸಂಚಾರ ವಿರಳವಾಯಿತು.

ಮುಂಜಾನೆಯಿಂದಲೂ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ಬೆಳಗ್ಗೆಯಿಂದ ರಾತ್ರಿಯವರೆಗೂ ಆಗಿಂದಾಗ್ಗೆ ಜಿಟಿಜಿಟಿಯಾಗಿ ಮಳೆ ಸುರಿಯಿತು. ಮಧ್ಯಾಹ್ನ 1ರ ನಂತರ ಕೆಲ ಭಾಗಗಳಲ್ಲಿ ಮಳೆ ಬಿರುಸು ಪಡೆಯಿತು.

ಸಂಜೆ 5.45ರ ಬಳಿಕ ನಗರದಲ್ಲಿ ಹತ್ತದಿನೈದು ನಿಮಿಷ ಉತ್ತಮ ಮಳೆಯಾಯಿತು. ದಿನವಿಡಿ ತುಂತುರು ಮಳೆಯಿಂದಾಗಿ ವಾಹನ ಸವಾರರು, ಜನ ಸಂಚರಿಸಲು ಪರದಾಡುವಂತಾಯಿತು. ಕೆಲವೆಡೆ ಕೆಳ ಸೇತುವೆಗಳು ಕೆಲವೇ ನಿಮಿಷಗಳಲ್ಲಿ ಸ್ವಲ್ಪಮಟ್ಟಿಗೆ ಜಲಾವ್ರತವಾದವು.

ವರುಣನ ಕೃಪೆಯಿಂದಾಗಿ ರೈತರ ಮೊಗದಲ್ಲಿ ಈಗಷ್ಟೇ ಮಂದಹಾಸ ಬೀರಲಾರಂಭಿಸಿದ್ದು, ಉತ್ತಮ ಮಳೆಯಾಗುವ ನಿರೀಕ್ಷೆಯೊಂದಿಗೆ ಕೆಲ ಭಾಗಗಳಲ್ಲಿ ಮಾತ್ರ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆ ಗರಿಗೆದರಿದೆ.

ಇದ್ದಕ್ಕಿದ್ದಂತೆ ಸುರಿದ ಮಳೆಯಿಂದಾಗಿ ಕೆಲ ತಗ್ಗು ಪ್ರದೇಶದ ರಸ್ತೆಗಳಲ್ಲಿ ಸಣ್ಣ ಚರಂಡಿಗಳು ತುಂಬಿದವು. ಅದರಲ್ಲಿದ್ದ ಸೊಳ್ಳೆ ಹೊರಬಂದ ಕಾರಣ ಆ ಕಾಟಕ್ಕೂ ನಾಗರಿಕರು ಹೈರಾಣಾದರು.

ಬಾಗೂರಿನಲ್ಲಿ 50.6 ಮಿ.ಮೀ ಮಳೆ: ಹೊಸದುರ್ಗ ತಾಲೂಕಿನ ಬಾಗೂರಿನಲ್ಲಿ 50.6 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯಲ್ಲೇ ಸೋಮವಾರ ಸುರಿದ ಅತ್ಯಧಿಕ ಮಳೆಯಾದ ಪ್ರದೇಶವಾಗಿದೆ.

ಹೊಸದುರ್ಗ-27.4 ಮಿ.ಮೀ, ಮಾಡದಕೆರೆ-26.2, ಮತ್ತೋಡು-10.2, ಶ್ರೀರಾಂಪುರ-10, ಚಿತ್ರದುರ್ಗ 2ರಲ್ಲಿ-12.4, ಭರಮಸಾಗರ-11.4, ಸಿರಿಗೆರೆ-35.2, ಐನಹಳ್ಳಿ-22.4, ತುರುವನೂರು-8.4, ನಾಯಕನಹಟ್ಟಿ-8.2, ಹೊಳಲ್ಕೆರೆ-14.2, ರಾಮಗಿರಿ-15.4, ಚಿಕ್ಕಜಾಜೂರು-16.8, ಬಿ.ದುರ್ಗ-15.2, ಎಚ್.ಡಿ.ಪುರ-17 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net