ಕೋಟೆ ನಾಡಿನಲ್ಲಿಶಾಲೆ,ಕಾಲೇಜುಗಳಿಗೆ ಚಾಲನೆ

20210101_101324.jpg NN
Published on

ಚಿತ್ರದುರ್ಗ:ನಗರ ಸಹಿತ ಜಿಲ್ಲಾದ್ಯಂತ ವಿವಿಧೆಡೆ ಎಸ್ಸೆಸ್ಸೆಲ್ಸಿ,ದ್ವಿತೀಯ ಪಿಯುಸಿ ತ&&ರಗತಿಗಳು ಆರಂಭವಾದವು. ಬೆಳಗ್ಗೆ 10ಗಂಟೆಗೆ ಆರಂಭವಾಗುವ ತರಗತಿಗೆ ಸಾಕಷ್ಟು ಸಮಯದ ಮುನ್ನವೇ ವಿದ್ಯಾರ್ಥಿಗಳು ಶಾಲೆ,ಕಾಲೇಜುಗಳತ್ತ ಆಗಮಿಸ ತೊಡಗಿದರು. ಸಾಮಾಜಿಕ ಅಂತರದೊಂದಿಗೆ ಮಾಸ್ಕ್ ಧರಿಸಿದ್ದ ವಿದ್ಯಾರ್ಥಿಗಳು,ಶಿಕ್ಷಕರು,ಉಪನ್ಯಾಸಕರು ಕೋವಿಡ್ ಮಾರ್ಗಸೂಚಿಯಂತೆ ತರಗತಿಗಳಿಗೆ ಪ್ರವೇಶಿಸಿದರು. ಮಧ್ಯಾಹ್ನ ವಿದ್ಯಾಗಮ ತರಗತಿಗಳು ನಡೆಯಲಿವೆ.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿ ತರಗತಿಗಳ ಪುನರಾರಂಭಕ್ಕೆ ಚಾಲನೆ ನೀಡಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಇತಿಹಾಸದಲ್ಲಿ ಹಿಂದೆಂದೂ ಕಾಣದಂಥ ಭೀಕರ ಅನುಭವವನ್ನು ಕಾಣುವಂತಾಗಿದ್ದು, ಶಾಲೆ,ಕಾಲೇಜುಗಳ ಆರಂಭ ಉತ್ತಮ ಬೆಳವಣಿಗೆ, ಸಿಎಂ,ಡಿಸಿಎಂ,ಸಚಿವರು ಸಾಕಷ್ಟು ಚರ್ಚೆ ಮಾಡಿಯೇ ತರಗತಿಗಳಿಗೆ ಆರಂಭಕ್ಕೆ ಆದೇಶಿಸಿದ್ದಾರೆ.

ಶಾಲೆಗಳು ಮುಚ್ಚಿರುವ ಈ ಅವಧಿಯಲ್ಲಿ ಅನೇಕ ಮಕ್ಕಳು ವಿದ್ಯಾಭ್ಯಾಸ ಸ್ಥಗಿತಗೊಳಿಸಿ ಪೋಷಕರೊಂದಿಗೆ ಕೂಲಿ ಕೆಲಸಕ್ಕೆ ಹೋಗಿರುವುದನ್ನು ಗಮನಿಸಿದ್ದೇನೆ. ಕಾನೂನು ಬಾಹಿರ ಎಂದಾದರೂ ಅನೇಕ ಕಡೆ ಅಪ್ರಾಪ್ತರ ವಿವಾಹವಾಗಿರುವುದನ್ನು ಕೇಳಿದ್ದೇನೆ. ಎಲ್ಲ ತರಗತಿಗಳ ಆರಂಭವಾದರೆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದೆಂದರು. ಬಿಇಒ ಸಿದ್ದಪ್ಪ, ಪ್ರಾಚಾರ‌್ಯ ನಾಗರಾಜ್, ಮುಖ್ಯಶಿಕ್ಷಕ ಜಯಪ್ಪ,ಶಿಕ್ಷಕರು,ಉಪನ್ಯಾಸಕರು, ಸರ್ಕಾರಿ ನೌಕರರ ಜಿಲ್ಲಾ ಸಂಘದ ಅಧ್ಯಕ್ಷ ಮಂಜುನಾಥ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net