

ಯಾದಗಿರಿ: ಕೆಕೆಆರ್‌ಡಿಬಿ ಬಿಡುಗಡೆ ಮಾಡಿದ್ದ ಅನುದಾನದಡಿ ಸುಮಾರು ಒಂದು ಕೋಟಿ ರೂನಲ್ಲಿ ಖರೀದಿಸಿದ್ದ ವಿವಿಧ ವಾಹನಗಳ ಲೋಕಾಪರ್ಣೆ ಕಾರ್ಯಕ್ರಮ ಸೋಮವಾರ ಇಲ್ಲಿನ ಎಸ್‌ಪಿ ಕಚೇರಿಯಲ್ಲಿ ಜರುಗಿತು.
ವಿವಿಧ ವಾಹನಗಳಾದ ಮೂರು ಬಸ್‌ಗಳು ( ಸಶಸ್ತç ಮೀಸಲು ಪಡೆಗೆ), ಎಂಟು ದ್ವಿಚಕ್ರವಾಹನಗಳು, ಒಂದು ಬುಲೊರಾ, ಮೂರು ವಾಹಬನಗಳು, ಎರಡು ಅತ್ಯಾಧುನಿಕ ತಂತ್ರe್ಞÁನದ ಡ್ರೋನ್ ಕ್ಯಾಮರಾ ಸೇರಿ ಇತರೆ ವಸ್ತುಗಳನ್ನು ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಶಾಸಕ ಚನ್ನಾರಡ್ಡಿ ಪಾಟೀಲï ತುನ್ನೂರ ಉದ್ಘಾಟಿಸಿದರು. ಎಸ್‌ಪಿ ಪ್ರಥ್ವಿಕ್ ಶಂಕರ್, ಡಿಸಿ ಡಾ.ಸುಶೀಲಾ, ಜಿಪಂ ಸಿಇಒ ಲವೀಶ್ ಓರ್ಡಿಯಾ ಇತರರಿದ್ದರು.
ಇನ್ನೂ ೧೫ ದಿನಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಹದಿನೈದು ದಿನಗಳಲ್ಲಿ ನಗರದ ವಿವಿಧಡೆ ೮೫ ಸಿಸಿ ಕ್ಯಾಮರಾ ಅಳವಡಿಸಲಾಗುವು ಎಂದು ಎಸ್.ಪಿ.ಪೃಥ್ವಿಕ್ ಶಂಕರ್ ಹೇಳಿದರು. ವಿವಿಧ ವಾಹನಗಳ ಮತ್ತು ಇತರೇ ಅಗತ್ಯ ವಸ್ತುಗಳ ಖರೀದಿಗಾಗಿ ಕೆಕೆಆರ್‌ಡಿಬಿ ೧.೦೩ ಕೋಟಿ ರೂ.ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ಇಂದು ಲೋಕಾರ್ಪಣೆಯಾದ ವಾಹನಗಳು ಸೇರಿ ಇತರೇ ವಸ್ತುಗಳು ಸೇರಿವೆ ಎಂದರು. ಕಳೆದ ೨-೩ ತಿಂಗಳಿAದ ವಾಹನಗಳು ಬಂದು ನಿಂತಿದ್ದವು. ಬಹಳ ದಿನವಾಯಿತೆಂದು ಅವಸರದಲ್ಲಿ ಇಂದು ಸಚಿವರಿಂದ ಬಿಡುಗಡೆ ಮಾಡಿಸಲಾಗಿದೆ ಎಂದು ಎಸ್‌ಪಿ ಹೇಳಿದರು.