ಕೋಚಿಮುಲ್ ಹಾಲು ಖರೀದ ದರ ಇಳಿಕೆಗೆ ವಿರೋಧ

3CBP1
Published on

ಚಿಕ್ಕಬಳ್ಳಾಪುರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರೈತರಿಂದ ಹಾಲು ಖರೀದಿ ದರದಲ್ಲಿ ಲೀಟರ್‌ಗೆ 4 ರೂ.ಇಳಿಕೆ ಮಾಡಿರುವುದು ವಿರೋಧಿಸಿ ಸೋಮವಾರ ರೈತಸಂಘ, ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ತಾಲೂಕಿನ ನಂದಿ ಕ್ರಾಸ್ ಸಮೀಪದ ಮೆಗಾ ಡೇರಿ ಎದುರು ಪ್ರತಿಭಟನೆ ನಡೆಸಿತು.

ಲಾಕ್‌ಡೌನ್ ಸಂದರ್ಭದಲ್ಲಿನ ಕೃಷಿಯ ಆರ್ಥಿಕ ಸಂಕಷ್ಟದಿಂದ ಹೊರಬರಲು ಹೈನೋದ್ಯಮ ಆಸರೆಯಾಗಿತ್ತು, ಈ ನಡುವೆ ನಿರ್ವಹಣೆ ವೆಚ್ಚ ದುಬಾರಿಯಾಗಿರುವುದರಿಂದ ದರ ಹೆಚ್ಚಳದ ನಿರೀಕ್ಷೆ ಹೊಂದಲಾಗಿತ್ತು, ಆದರೆ ಅದೆಲ್ಲ ಹುಸಿಯಾಗಿದೆ. ಒಕ್ಕೂಟವು ಎರಡು ಬಾರಿ ತಲಾ 2 ರೂ. ಇಳಿಸಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಟಿ.ಲಕ್ಷ್ಮೀನಾರಾಯಣರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ರೈತರಹಿತ ಕಾಪಾಡುವ ಉದ್ದೇಶದಿಂದ ಇಳಿಕೆಯಾಗಿರುವ ಹಾಲಿನ ದರವನ್ನು ಮತ್ತೆ ಹೆಚ್ಚಿಸಬೇಕು. ಕಾಲ ಕಾಲಕ್ಕೆ ಬೆಂಬಲ ಬೆಲೆ ನೀಡಬೇಕು. ಫೀಡ್ ಅನ್ನು 1,020 ರೂ.ಗಳಿಂದ 800 ರೂ.ಗಳಿಗೆ ಸಬ್ಸಿಡಿ ದರದಲ್ಲಿ ವಿತರಿಸಬೇಕು. ರಾಸು ವಿಮೆಗೆ ರೈತರಿಂದ 112 ರೂ. ಪಡೆಯುವುದನ್ನು ನಿಲ್ಲಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಒಕ್ಕೂಟದ ವ್ಯವಸ್ಥಾಪಕ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು. ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಯಾಕೂಬ್ ಷರೀಫ್, ಮಹಿಳಾ ಉಪಾಧ್ಯಕ್ಷೆ ಅನಸೂಯಮ್ಮ, ಜಿಲ್ಲಾ ಗೌರವಾಧ್ಯಕ್ಷ ಎ.ವಿ.ವೆಂಕಟರಾಮಯ್ಯ, ಉಪಾಧ್ಯಕ್ಷ ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ, ಕಾರ್ಯದರ್ಶಿ ರೆಡ್ಡಪ್ಪ, ಸಂಚಾಲಕ ರಾಮಾಂಜಿನಪ್ಪ, ತಾಲೂಕು ಅಧ್ಯಕ್ಷರಾದ ಕೆ.ನಾರಾಯಣಸ್ವಾಮಿ, ಎಸ್.ಎಂ.ರವಿಪ್ರಕಾಶ್, ವೆಂಕಟ್ರೋಣಪ್ಪ, ತ್ಯಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net